Thursday, September 11, 2025
HomeUncategorizedಕುತೂಹಲ ಮೂಡಿಸಿದ ಸುಧಾಕರ್-ಬಿಎಸ್​ವೈ ಭೇಟಿ!

ಕುತೂಹಲ ಮೂಡಿಸಿದ ಸುಧಾಕರ್-ಬಿಎಸ್​ವೈ ಭೇಟಿ!

ಬೆಂಗಳೂರು : ಅನರ್ಹ ಶಾಸಕ ಡಾ. ಸುಧಾಕರ್ ಇಂದು ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಮುಖ್ಯಮಂತ್ರಿಯವರ ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ. ಸುಧಾಕರ್, ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದಾಗ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಆಗ ಅಭಿನಂದನೆ ಸಲ್ಲಿಸಲು ಆಗಿರಲಿಲ್ಲ, ಒಬ್ಬ ರಾಜ್ಯದ ಪ್ರಜೆಯಾಗಿ ಇಂದು ಅವರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು.

ಇನ್ನು ಸುಧಾಕರ್ ಬಿಜೆಪಿ ಸೇರುತ್ತಾರಾ ಎಂಬ ಪತ್ರಕರ್ತರ  ಪ್ರಶ್ನೆಗೆ ಉತ್ತರಿಸಿದ ಸುಧಾಕರ್ ನಾನಿನ್ನು ಅದರ ಬಗ್ಗೆ ಚರ್ಚೆ ಮಾಡಿಲ್ಲ. ಮೊದಲು ನನ್ನ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ಬಾಕಿ ಇದೆ, ಅದರ ಕುರಿತು ಮಾತ್ರ ಚರ್ಚೆ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ಧಾರೆ. ಸುಧಾಕರ್ ಹಾಗೂ ಯಡಿಯೂರಪ್ಪನವರ ಈ ಭೇಟಿ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು ಸುಧಾಕರ್ ಬಿಜೆಪಿಗೆ ಸೇರುತ್ತಾರೊ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments