Thursday, August 28, 2025
HomeUncategorizedಕಾಲಹರಣ  ಸರಿಯಲ್ಲ :  ಸ್ಪೀಕರ್ ರಮೇಶ್ ಕುಮಾರ್

ಕಾಲಹರಣ  ಸರಿಯಲ್ಲ :  ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು : ಕಾಲಹರಣ ಮಾಡುವುದು ಸರಿಯಲ್ಲ. ಸದನದ ಗೌರವ ಕಾಪಾಡಬೇಕು ಅಂತ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು. ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಚರ್ಚೆ ನಡೆಯುತ್ತಿದ್ದು, ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಲಹರಣ ಮಾಡದಂತೆ ಸದಸ್ಯರಿಗೆ ಕಿವಿಮಾತು ಹೇಳಿದರು.

ಆರಂಭದಲ್ಲೇ ಸಿಎಲ್​ಪಿ ನಾಯಕ ಸಿದ್ದರಾಮಯ್ಯರವರ ಕ್ರಿಯಾಲೋಪದ ಮೇಲೆ ಸ್ಪೀಕರ್ ರೂಲಿಂಗ್​ ನೀಡಿದರು. ಅತೃಪ್ತ ಶಾಸಕರಿಗೂ ವಿಪ್ ಜಾರಿಗೊಳಿಸಲು ಅವಕಾಶವಿದೆ ಅಂತ ತಿಳಿಸಿದ್ರು.

ನಂತರ ಚರ್ಚೆ ವೇಳೆ ಮಾತನಾಡಿದ ಕೃಷ್ಣ ಬೈರೇಗೌಡ, ಬಿಜೆಪಿ ನಾಯಕರೊಬ್ರು ಅತೃಪ್ತ ಶಾಸಕರೊಂದಿಗೆ ಮಾತನಾಡಿದ ಆಡಿಯೋ ವಿಚಾರಗಳನ್ನು ಪ್ರಸ್ತಾಪಿಸಿ. ಇದು ಆಪರೇಷನ್ ಅಲ್ವೇ ಅಂತ ಪ್ರಶ್ನೆ ಮಾಡಿದ್ರು. ಆಗ ಮಧ್ಯಪ್ರವೇಶಿಸಿದ ಜಗದೀಶ್ ಶೆಟ್ಟರ್ ಸದನದಲ್ಲಿ ಹಾಜರಿಲ್ಲದ ಶಾಸಕರ ಬಗ್ಗೆ ಆರೋಪ ಮಾಡೋದು ತಪ್ಪು ಅಂತ ಬೈರೇಗೌಡರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ರು.

ಆಗ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ”ಸದಸನಕ್ಕೆ ಗೌರವ ಕೊಡೋದು ನಮ್ ಕರ್ತವ್ಯ. ಇದು ಬಜೆಟ್ ಅಧಿವೇಶನವಲ್ಲ, ಇದೊಂದು ವಿಚಿತ್ರವಾದ ಸನ್ನಿವೇಶ. ವಿಶ್ವಾಸ ಮತವೊಂದೇ ವಿಚಾರ. ಕಾಲಹರಣ ಮಾಡಬಾರದು. ನಾನು ಅಪವಾದ ಹೊತ್ತಿಕೊಳ್ಳಲು ಸಿದ್ಧನಿಲ್ಲ”ಅಂದ್ರು. ಜನ ಆರಿಸಿ ಕಳ್ಸಿದ್ದಾರೆ. ಸಂವಿಧಾನ ಬದ್ಧವಾಗಿ ಶಾಸಕರಾಗಿ ಬಂದವರು. ಸದನಕ್ಕೆ ಬರಬೇಕಲ್ಲವೇ? ಇಂಥಾ ಪರಿಸ್ಥಿತಿಯಿಂದ ಸದನದ ಗೌರವ ಏನಾಗ್ಬೇಕು ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments