ಬೆಂಗಳೂರು: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಜೂನ್. 13ರ ತನಕ ರಾಜ್ಯದಲ್ಲಿ ಶೋಕಾಚರಣೆ ಜಾರಿಯಲ್ಲಿರಲಿದೆ. ಶೋಕಾಚರಣೆ ಹಿನ್ನೆಲೆ ಸಂಪುಟ ವಿಸ್ತರಣೆ ಮುಂದೂಡಲಾಗಿದೆ. ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು, ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿದೆ. ಸಿಎಂ ಹೆಚ್. ಡಿ. ಕುಮಾರಸ್ವಾಮಿ ಜೂನ್ 13ರಂದು ಸಂಪುಟ ವಿಸ್ತರಣೆಗೆ ಅವಕಾಶ ಕೋರಿದ್ದರು. ರಾಜ್ಯಪಾಲರ ಬಳಿ ಸಮಯವನ್ನೂ ನಿಗದಿಪಡಿಸಿದ್ದರು. ಆದರೆ ಜೂನ್ 13ರವರೆಗೂ ರಾಜ್ಯದಲ್ಲಿ ಶೋಕಾಚರಣೆ ಜಾರಿಯಾಗಿರುವುದರಿಂದ ಸಂಪುಟ ವಿಸ್ತರಣೆಗೆ ವಿಘ್ನವಾಗಿದೆ.
13ರ ತನಕ ರಾಜ್ಯದಲ್ಲಿ ಶೋಕಾಚರಣೆ: ಸಂಪುಟ ವಿಸ್ತರಣೆ ಮಂದೂಡಿಕೆ ?
RELATED ARTICLES