Friday, September 12, 2025
HomeUncategorizedನೂತನ ಸಂಸದರಿಗೆ ಮೋದಿ ಹೇಳಿದ ಕಿವಿಮಾತು ಏನ್ ಗೊತ್ತಾ?

ನೂತನ ಸಂಸದರಿಗೆ ಮೋದಿ ಹೇಳಿದ ಕಿವಿಮಾತು ಏನ್ ಗೊತ್ತಾ?

ನವದೆಹಲಿ: ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನವದೆಹಲಿಯಲ್ಲಿ ನಡೆದ ಎನ್‌ಡಿಎ ಸದಸ್ಯರು ಸಂಸದೀಯ ಸಭೆಯಲ್ಲಿ ಮೋದಿ ಅವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ರು.
ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ ಬಳಿಕ ಮಾತನಾಡಿದ ನರೇಂದ್ರ ಮೋದಿ, ‘ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ನೋಡಿ ಅಥವಾ ಇನ್ಯಾರದ್ದೋ ಮಾತುಗಳನ್ನು ಕೇಳಿ ನಿಮಗೆ ಮಂತ್ರಿ ಸ್ಥಾನ ಸಿಗುತ್ತದೆ. ಮಂತ್ರಿ ಆಗಿಬಿಟ್ಟಿರಿ ಅಂತ ಅಂದುಕೊಳ್ಳಬೇಡಿ. ಹಾಗೆಯೇ ನಿಮ್ಮ ಸೇವೆ ಮಾಡಲು ಬರೋರನ್ನು ಹೆಚ್ಚಾಗಿ ನಂಬಬೇಡಿ ಅಂತ ಕಿವಿಮಾತು ಹೇಳಿದ್ರು .
ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿತ್ತು. ಅದಕ್ಕೊಂದು ರಂಗ ಇತ್ತು. ಚುನಾವಣೆ ಬಳಿಕ ವಿಜಯೋತ್ಸವ ಮತ್ತಷ್ಟು ರಂಗು ಪಡೆಯಿತು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಉತ್ಸವ ಗರಿಗೆದರಿತ್ತು ಎಂದ ಮೋದಿ ದೇಶದ ಜನತೆಗೆ ಮತ್ತು ವಿಶ್ವದ ಬೇರೆ-ಬೇರೆ ದೇಶಗಳಲ್ಲಿ ಸಂಭ್ರಮಿಸಿದವರಿಗೂ ಧನ್ಯವಾದ ತಿಳಿಸಿದ್ರು.
ಪ್ರಚಂಡ ಗೆಲುವು ಜವಾಬ್ದಾರಿಯನ್ನೂ ಮತ್ತಷ್ಟು ಹೆಚ್ಚಿಸಿದೆ. ದೇಶದ ಜನರಲ್ಲಿ ಮತ್ತಷ್ಟು ಪ್ರಭುದ್ಧತೆಯೂ ಹೆಚ್ಚಾಗಿದೆ. ಜನತೆ ನಮ್ಮನ್ನು ಆಯ್ಕೆ ಮಾಡಿದ್ದು ಸೇವೆ ಮಾಡುವುದಕ್ಕೆ. ಅಧಿಕಾರದ ದಾಹದಲ್ಲಿ ಜನರನ್ನು ಮರೆತರೆ ಶಾಸ್ತಿ ಆಗುತ್ತೆ . ನಮ್ಮ ಸೇವಾ ಭಾವನೆಯಿಂದ ಜನರು ಸ್ವೀಕಾರ ಮಾಡಿದ್ದಾರೆ. ನಾನು ಕೂಡ ತಮ್ಮ ಮಧ್ಯೆ ಒಬ್ಬನಾಗಿದ್ದು, ಒಗ್ಗೂಡಿ ಸಾಗೋಣ. ಅಧಿಕಾರ ಪರಸ್ಪರರ ಮಧ್ಯೆ ಗೋಡೆ ಕಟ್ಟುವಂತೆ ಮಾಡುತ್ತೆ. ಆದ್ರೆ , 2019ರ ಚುನಾವಣೆ ಗೋಡೆ ಬೀಳಿಸುವ ಕೆಲಸ ಮಾಡಿದೆ . ಎಲ್ಲರೂ ಪರಸ್ಪರ ಮತ್ತಷ್ಟು ಹತ್ತಿರ ಆಗುವಂತೆ ಮಾಡಿದೆ ಎಂದರು.
ಈ ಚುನಾವಣೆ ಸಮಭಾವನೆಯಿಂದ ಒಗ್ಗೂಡುವಂತೆ ಮಾಡಿದೆ. 2014ರಿಂದ 19ರ ವರೆಗೆ ಜನರು ನಮ್ಮನ್ನು ಬೆಂಬಲಿಸಿದ್ದಾರೆ . ಕೇವಲ ಜನರು ನಮ್ಮನ್ನು ಅಧಿಕಾರಕ್ಕೆ ಮಾತ್ರ ತಂದಿಲ್ಲ . ಗ್ಯಾಸ್​ ಸಬ್ಸಿಡಿ ತ್ಯಜಿಸುವ ಮೂಲಕ ಜನ ಬೆಂಬಲಿಸಿದ್ದಾರೆ. ಅಂತಹ ಅನೇಕ ಮನವಿಗಳಿಗೆ ದೇಶದ ಜನ-ಮನ ಸ್ಪಂದಿಸಿದೆ. ದೇಶದ ಜನತೆ ಮತ್ತು ಸರ್ಕಾರದ ಮಧ್ಯೆ ವಿಶ್ವಾಸ ವೃದ್ಧಿಸಿದೆ. ಪರಿಶ್ರಮದ ಪರಾಕಾಷ್ಠೆಗೆ ಪ್ರಾಮಾಣಿಕತೆಯ ಮನಸ್ಸು ಬೇಕು. ಅಂತಹವರ ಜೊತೆಯಲ್ಲಿ ದೇಶದ ಜನತೆ ಸದಾ ಇರುತ್ತದೆ. ಇದೇ ಭರವಸೆಯಲ್ಲಿ ಎಲ್ಲರೂ ಮುಂದುವರೆವ ಭರವಸೆಯಿದೆ ಅಂತಾ ಹೇಳಿದ್ರು.

ಜನಪ್ರತಿನಿಧಿಗೆ ಯಾವುದೇ ಭೇದ ಭಾವ ಇರಕೂಡದು. ಯಾರು ನಮ್ಮ ಜೊತೆಯಲ್ಲಿ ಇದ್ದಾರೋ ಅವರಿಗಾಗಿ ನಾವಿದ್ದೇವೆ. ಯಾರು ಭವಿಷ್ಯದಲ್ಲಿ ನಮ್ಮ ಜೊತೆ ಬರ್ತಾರೆ ಅವರಿಗಾಗಿ ಇದ್ದೇವೆ . ಸಂವಿಧಾನಕ್ಕೆ ನಮಸ್ಕರಿಸಿದ ನಾನು ಈ ಮಾತು ಹೇಳ್ತಿದ್ದೇನೆ. ಸಂವಿಧಾನ ನಮಗೆ ಆ ಜವಾಬ್ದಾರಿಯನ್ನು ವಹಿಸಿದೆ. ಮಾನವೀಯ ಗುಣ ಹೊಂದಿ ಆ ಜವಾಬ್ದಾರಿ ನಿಭಾಯಿಸಬೇಕು ಅಂತಾ ಕಿವಿಮಾತು ಹೇಳಿದ್ರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments