ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರೋದು ‘ನಿಖಿಲ್ ಎಲ್ಲಿದ್ದಿಯಪ್ಪಾ’ ಅನ್ನೋ ಡೈಲಾಗ್.
ಈ ಡೈಲಾಗ್ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ಕೆ.ಆರ್ ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನಿಖಿಲ್ ಎಲ್ಲಿದ್ದಿಯಪ್ಪಾ ಅಂದ್ರೆ ನಮ್ಮ ಹೃದಯದಲ್ಲಿದ್ದಾನೆ ಅಂತ ಹೇಳಬೇಕು. ಯುವಕರು ಟ್ರೋಲ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿಖಿಲ್ ನಮ್ಮ ಹೃದಯದಲ್ಲಿದ್ದಾನೆ ಎಂದು ಹೇಳಿ ಎಂದರು.
ನಿಖಿಲ್ ಎಲ್ಲಿದ್ದಿಯಪ್ಪಾ ಅಂದ್ರೆ ಹೃದಯದಲ್ಲಿದ್ದಾನೆ ಅನ್ನಿ : ಸಿಎಂ ಕುಮಾರಸ್ವಾಮಿ
RELATED ARTICLES