ಕಲಬುರಗಿ : ಸಚಿವ ಪಿ.ಟಿ ಪರಮೇಶ್ವರ ನಾಯ್ಕ್ ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರೋ ಘಟನೆ ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಘಟನೆಯಲ್ಲಿ ಪರಮೇಶ್ವರ್ ನಾಯ್ಕ್ ಅವರ ಕಾರಿನ ಗಾಜು ಪುಡಿ ಪುಡಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪರಮೇಶ್ವರ್ ನಾಯ್ಕ್ ಅವರು ಚಿತ್ತಾಪುರಕ್ಕೆ ತೆರಳಿದ್ದರು. ಈ ವೇಳೆ ಕಲ್ಲು ತೂರಾಟ ನಡೆಸಲಾಗಿದೆ. ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ಬೆಂಬಲಿಗರು ಈ ಕಿಡಿಗೇಡಿ ಕೃತ್ಯ ಎಸಗಿರೋದು ಎಂದು ಹೇಳಲಾಗುತ್ತಿದೆ.
ಸಚಿವ ಕಾರಿಗೆ ಕಲ್ಲು ತೂರಾಟ ನಡೆಸಿರೋದಲ್ಲದೆ ಕಾರಿಗೆ ಮುತ್ತಿಗೆ ಹಾಕಿ ಗೋ ಬ್ಯಾಕ್ ನಾಯಕ್ ಎಂದು ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನೂ ನಡೆಸಲಾಗಿದೆ.
ಪರಮೇಶ್ವರ್ ನಾಯ್ಕ್ ಕಾರಿನ ಮೇಲೆ ಕಲ್ಲು ತೂರಾಟ..!
RELATED ARTICLES