ಬೆಂಗಳೂರು: ಹೆಣ್ಣು, ಹೊನ್ನು, ಮಣ್ಣಿಗೆ ಪ್ರಪಂಚದಲ್ಲಿ ಮಹಾನ್ ಯುದ್ಧಗಳೆ ನಡೆದುಹೋಗಿದೆ. ಈಗಿರುವಾಗ ಕೊಲೆಗಳು ಯಾವ ಲೆಕ್ಕ. ಇಲ್ಲೊಬ್ಬ ಯುವಕ ತಾನು ಪ್ರೀತಿ ಮಾಡ್ತಿದ್ದ ಯುವತಿಯನ್ನ, ಮತ್ತೊಬ್ಬ ಯುವಕ ಪ್ರೀತಿಸಿದ್ದ ಅನ್ನೋ ಕಾರಣಕ್ಕಾಗಿ ಪಾರ್ಟಿ ಮಾಡೋ ನೆಪದಲ್ಲಿ ಫಾರ್ಮ್ಹೌಸ್ಗೆ ಕರೆದು ಮನೋಸೋ ಇಚ್ಚೆ ಚಾಕುವಿನಲ್ಲಿ ಇರಿದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ :ನಟ ಕಾಡ ನಟರಾಜ್ ಅಭಿನಯದ ‘ಕರಿಕಾಡ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ
ದೊಡ್ಡಬಳ್ಳಾಪುರದ, ರೈಲ್ವೇ ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು. ವೇಣುಗೋಪಲ್ ಎಂಬಾತ ದರ್ಶನ್ ಎಂಬ ಯುವಕನನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ. ವೇಣುಗೋಪಾಲ್ ಪ್ರೀತಿಸುತ್ತಿದ್ದ ಯುವತಿಯನ್ನ, ದರ್ಶನ್ ಕೂಡ ಪ್ರೀತಿಸುತ್ತಿದ್ದ. ಆಕೆ ವೇಣುಗೋಪಾಲ್ನನ್ನು ಬಿಟ್ಟು, ದರ್ಶನ್ನನ್ನ ಪ್ರೀತಿಸುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ವೇಣುಗೋಪಾಲ್ ದರ್ಶನ್ ಕೊಲೆ ಮಾಡಲು ಸಂಚು ರೂಪಿಸಿದ್ದನು.
ಇದೇ ಕಾರಣಕ್ಕೆ ಪಾರ್ಟಿ ಮಾಡೋ ನೆಪದಲ್ಲಿ ರಾತ್ರಿ 9.30ರ ಸುಮಾರಿಗೆ ಯುವತಿಯ ಮಾಜಿ ಲವ್ವರ್ ವೇಣುಗೋಪಾಲ್ ಹಾಲಿ ಲವ್ವರ್ ದರ್ಶನ್ರನ್ನು ತೋಟದ ಮನೆಗೆ ಕರೆಸಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ವೇಣು ಗೋಪಾಲ್, ಹಾಲಿ ಲವ್ವರ್ ದರ್ಶನ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡ್ತಿದ್ದಂತೆ ಮಾಜಿ ಪ್ರಿಯತಮ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ :ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
ಸದ್ಯ ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಿಎನ್ಎಸ್ 103 ಅಡಿಯಲ್ಲಿ ಕೇಸ್ ದಾಖಲಾಗಿದೆ. ಮುಂದುವರೆದು ಪೊಲೀಸರು ತಂಡ ರಚನೆ ಮಾಡಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.