ಕಾರವಾರ: RCB ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು. ಒಬ್ಬೊಬ್ಬರ ಕಥೆಯು ಕರುಳು ಹಿಂಡುವಂತಿದೆ, ವರ್ಷದ ಹಿಂದೆ ಮದುವೆಯಾಗಿ, ಗಂಡನ ಜೊತೆ ಸ್ಟೇಡಿಯಂಗೆ ಬಂದಿದ್ದ ಜೋಡಿಗಳು ಕಾಲ್ತುಳಿತದಲ್ಲಿ ಬೇರಾಗಿದ್ದು. ಗಂಡನ ಕಣ್ಮುಂದೆಯೇ ಹೆಂಡತಿ ಸಾವನ್ನಪ್ಪಿದ್ದಾಳೆ. ಸಾವನ್ನಪ್ಪಿದ ಯುವತಿಯನ್ನು 28 ವರ್ಷದ ಅಕ್ಷತಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ :ಬಿಜೆಪಿಯರು ಸಾವಿನ ಮೇಲೆ ರಾಜಕೀಯ ಮಾಡ್ತಿದ್ದಾರೆ; ಘಟನೆ ನೆನೆದು ಡಿಕೆಶಿ ಕಣ್ಣೀರು..!
ವರ್ಷದ ಹಿಂದೆ ಮದುವೆಯಾಗಿದ್ದ ಅಕ್ಷತಾ..!
ಮೂಲತಃ ಕಾರವಾರದ ,ಸಿದ್ದಪುರದ ಅಕ್ಷತಾ ಒಂದು ವರ್ಷದ ಹಿಂದೆ ಆಶಯ್ ಎಂಬುವವರ ಜೊತೆ ಮದುವೆಯಾಗಿದ್ದಳು. ಖಾಸಗಿ ಕಂಪನಿಯಲ್ಲಿ CA ಆಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಷತಾ, ಪತಿ ಜೊತೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಪತಿ ಕೂಡ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ :ದರಿದ್ರ ಸರ್ಕಾರ, ಜಮೀರ್ ಮಗ, ರಿಜ್ವಾನ್ ಮಗನಿಗೆ ವೇದಿಕೆ ಮೇಲೆ ಏನು ಕೆಲಸ; ಪ್ರತಾಪ್ ಸಿಂಹ ಆಕ್ರೋಶ
ಇಬ್ಬರು ಜೋಡಿಗಳು ಸುಖವಾಗಿ ಸಂಸಾರ ಸಾಗಿಸುತ್ತಿದ್ದರು, ಆದರೆ ನಿನ್ನೆ ಆರ್ಸಿಬಿ ಸಂಭ್ರಮಚರಣೆಯಲ್ಲಿ ಭಾಗಿಯಾಗಲು ಅಕ್ಷತಾ ತನ್ನ ಪತಿ ಆಶಯ್ ಜೊತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಅಕ್ಷತಾ ಅಸ್ವಸ್ಥರಾಗಿದ್ದು. ಪತಿ ಮುಂದೆಯೇ ಪತ್ನಿ ಕಣ್ಮುಚ್ಚಿದ್ದಾಳೆ. ಇದನ್ನೂ ಓದಿ :ಸಿಎಂ, ಡಿಸಿಎಂ ಯಾವುದೇ ತಪ್ಪು ಮಾಡಿಲ್ಲ; ಕಾಲ್ತುಳಿತದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
ಇನ್ನು ಅಕ್ಷತಾ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ರವಾನಿಸಿದ್ದು. ಅಲ್ಲಿಯೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.