ಬೆಂಗಳೂರು: ಆರ್ಸಿಬಿ ತಂಡ 17 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅಭಿಮಾನಿಗಳ ಜೊತೆ ಸಂಭ್ರಮಚಾರಣೆ ಮಾಡಲು ಆರ್ಸಿಬಿ ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸುತ್ತಿದ್ದು. ಓಪನ್ ಬಸ್ ಪರೇಡ್ ಮಾಡಲು ಸಿದ್ದತೆ ನಡೆಸಲಾಗಿತ್ತು. ಆದರೆ ಇದೀಗ ತೆರೆದ ಬಸ್ನಲ್ಲಿ ಆರ್ಸಿಬಿ ವಿಜಯೋತ್ಸವಕ್ಕೆ ಅವಕಾಶವಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ :ಬಸ್ & ಲಾರಿ ನಡುವೆ ಭೀಕರ ಅಪಘಾತ; ಮಹಿಳೆ ಸಾ*ವು, 15ಕ್ಕೂ ಅಧಿಕ ಜನರಿಗೆ ಗಾಯ
ವಿಧಾನಸೌಧದಲ್ಲಿ ಸಂಜೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಗ್ರ‍್ಯಾಂಡ್ ಸ್ಟೆಪ್ ಬಳಿ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಭದ್ರತೆಗೆ ಸಮಸ್ಯೆಯಾಗುವ ಕಾರಣ ಮತ್ತು ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿಂದ ಈ ಕ್ರಮ ಕೈಗೊಳ್ಳಲಾಗಿದ್ದು. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್ ಪರೇಡ್‌ಗೆ ಒಪ್ಪಿಲ್ಲ ಎಂದು ತಿಳಿದು ಬಂದಿದೆ.ಇದನ್ನೂ ಓದಿ :RCB ಅಭಿಮಾನಿಗಳಿಗೆ ಕೊಟ್ಟಿದ್ದ ಮಾತು ಈಡೇರಿಸಿದ ಕೃನಾಲ್ ಪಾಂಡ್ಯ