Site icon PowerTV

RCB ವಿಜಯೋತ್ಸವಕ್ಕೆ ಬ್ರೇಕ್​ ಹಾಕಿದ ರಾಜ್ಯ ಸರ್ಕಾರ; ತೆರೆದ ಬಸ್​ ಪರೇಡ್​ಗೆ ಇಲ್ಲ ಅವಕಾಶ

ಬೆಂಗಳೂರು: ಆರ್​ಸಿಬಿ ತಂಡ 17 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅಭಿಮಾನಿಗಳ ಜೊತೆ ಸಂಭ್ರಮಚಾರಣೆ ಮಾಡಲು ಆರ್​ಸಿಬಿ ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸುತ್ತಿದ್ದು. ಓಪನ್​ ಬಸ್​ ಪರೇಡ್​ ಮಾಡಲು ಸಿದ್ದತೆ ನಡೆಸಲಾಗಿತ್ತು. ಆದರೆ ಇದೀಗ ತೆರೆದ ಬಸ್​ನಲ್ಲಿ ಆರ್​ಸಿಬಿ ವಿಜಯೋತ್ಸವಕ್ಕೆ ಅವಕಾಶವಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ :ಬಸ್​ & ಲಾರಿ ನಡುವೆ ಭೀಕರ ಅಪಘಾತ; ಮಹಿಳೆ ಸಾ*ವು, 15ಕ್ಕೂ ಅಧಿಕ ಜನರಿಗೆ ಗಾಯ

ವಿಧಾನಸೌಧದಲ್ಲಿ ಸಂಜೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಗ್ರ‍್ಯಾಂಡ್ ಸ್ಟೆಪ್ ಬಳಿ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಭದ್ರತೆಗೆ ಸಮಸ್ಯೆಯಾಗುವ ಕಾರಣ ಮತ್ತು ಟ್ರಾಫಿಕ್​ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿಂದ ಈ ಕ್ರಮ ಕೈಗೊಳ್ಳಲಾಗಿದ್ದು. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್ ಪರೇಡ್‌ಗೆ ಒಪ್ಪಿಲ್ಲ ಎಂದು ತಿಳಿದು ಬಂದಿದೆ.ಇದನ್ನೂ ಓದಿ :RCB ಅಭಿಮಾನಿಗಳಿಗೆ ಕೊಟ್ಟಿದ್ದ ಮಾತು ಈಡೇರಿಸಿದ ಕೃನಾಲ್​ ಪಾಂಡ್ಯ

ವಿಕ್ಟರಿ ಪರೇಡ್‌ಗೆ ಲಕ್ಷಾಂತರ ಜನರು ಸೇರುವುದರಿಂದ ನಿರ್ವಹಣೆ ಕಷ್ಟ. ನಗರದ ಹೃದಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಆಗಲಿದೆ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳಿವೆ. ಆದ್ದರಿಂದ ಸೂಕ್ತ ಭದ್ರತೆ ಕಷ್ಟ ಎಂದು ಪೊಲೀಸ್ ಇಲಾಖೆ ಹೇಳಿದೆ.

Exit mobile version