ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೀಡಿದ್ದ ಗೌರವ ಡಾಕ್ಟರೇಟ್ ಪದವಿಯನ್ನ ಸಚಿವ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದು. ತಮ್ಮ ಮೇಲೆ ಸಾಕಷ್ಟು ಸಾಮಾಜಿಕ ಜವಬ್ದಾರಿಗಳಿವೆ, ಅವುಗಳನ್ನು ನಿಭಾಯಿಸಲು ಸಮಯ ಬೇಕಿದೆ. ಹೀಗಾಗಿ ನೀಡಿರುವ ಗೌರವ ಡಾಕ್ಟರೇಟ್ ಪದವಿ ಹಿಂಪಡೆಯಬೇಕು ಎಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ :‘ಕ್ಷಮೆ ಕೇಳದಿದ್ದರೆ, ಸಿನಿಮಾ ಯಾಕ್ ರಿಲೀಸ್ ಮಾಡ್ತೀರಾ’; ಕಮಲ್ಗೆ ಹಾಸನ್ಗೆ ಹೈಕೋರ್ಟ್ ತರಾಟೆ
ಕಳೆದ ಮಾರ್ಚ್.27ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಚಿವ ಸತೀಶ್ ಜಾರಕಿಹೊಳಿಗೆ ಡಾಕ್ಟರೇಟ್ ಡಿ.ಲಿಟ್ ಗೌರವ ಪದವಿ ನೀಡಿ ಸನ್ಮಾನಿಸಿತ್ತು. ಆದರೆ ಸಚಿವರು ತಮಗೆ ನೀಡಿದ್ದ ಗೌರವವನ್ನು ನಮ್ರತೆಯಿಂದ ನಿರಾಕರಿಸಿದ್ದು. ಪತ್ರ ಬರೆಯುವ ಮೂಲಕ ತಮ್ಮ ನಿರ್ಧಾರವನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ..!
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಸಮಕುಲಾಧಿಪತಿ, ಕುಲಪತಿ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರ ವತಿಯಿಂದ ದಿನಾಂಕ:27.03.2025 ರಂದು ನನಗೆ ವಿಶ್ವವಿದ್ಯಾನಿಲಯದ “ಗೌರವ ಡಾಕ್ಟರೇಟ್ ಡಿ.ಲಿಟ್.” ಗೌರವ ಪದವಿಯನ್ನು ನೀಡುವುದರ ಮೂಲಕ ಸನ್ಮಾನಿಸಿದ ತಮಗೆ ಹಾಗೂ ವ್ಯವಸ್ಥಾಪನ ಮಂಡಳಿಗೆ ನಾನು ಹೃತ್ತೂರ್ವಕವಾಗಿ ಆಭಾರಿಯಾಗಿದ್ದೇನೆ. ಇದನ್ನೂ ಓದಿ :ರೈತರ ಕಣ್ಣೀರಗೆ ಕಾರಣವಾದ ಈರುಳ್ಳಿ; ಬೆಲೆ ಕುಸಿತದಿಂದ ಕಂಗಲಾದ ಅನ್ನದಾತ
ಈ ಗೌರವ ಡಾಕ್ಟರೇಟ್ ಪದವಿಯನ್ನು ನನಗೆ ಪ್ರಧಾನಿಸುವ ಮೂಲಕ ತಾವು ಸಮಾಜದಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿರುತ್ತೀರಿ. ಸಾಮಾಜಿಕ ಸೇವೆಯಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುತ್ತೇನೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಂತಹ ಗುರುತರವಾದಂತಹ ಹೊಣೆಗಾರಿಕೆ ನನ್ನ ಮೇಲಿದ್ದು, ಇದಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶದ ಅವಶ್ಯಕತೆ ಇರುತ್ತದೆ. ಇದನ್ನೂ ಓದಿ :ಫಿನಾಲೆಯಲ್ಲಿ ಸೋಲನ್ನೇ ಕಾಣದ ಹ್ಯಾಜಲ್ವುಡ್; ಸತತ 6ನೇ ಕಪ್ ಗೆಲ್ಲುವ ತವಕದಲ್ಲಿ ಶ್ರೇಯಸ್| ಅದೃಷ್ಟಶಾಲಿ ಆಟಗಾರರ ಕದನ
ಈ ಹಿನ್ನಲೆಯಲ್ಲಿ, ತಾವು ಪ್ರೀತಿಪೂರ್ವಕವಾಗಿ ತಮ್ಮ ವಿಶ್ವವಿದ್ಯಾನಿಲಯದ ವತಿಯಿಂದ ನನಗೆ ನೀಡಿದಂತಹ ಗೌರವ ಡಾಕ್ಟರೇಟ್ ಪದವಿಯನ್ನು ಹಿಂಪಡೆಯಲು ಕೋರುತ್ತೇನೆ. ಮುಂದುವರೆದಂತೆ, ನನ್ನ ಈ ನಿರ್ಧಾರವನ್ನು ಅನ್ಯಥಾ ಭಾವಿಸದೇ, ನಾನು ಮನಸೋಯಿಚ್ಚೆ ಕೈಗೊಂಡಿರುವ ನಿರ್ಧಾರವಾಗಿದ್ದು, ತಾವು ಈ ನಿರ್ಧಾರವನ್ನು ಸ್ವಾಗತಿಸುತ್ತೀರೆಂದು ಭಾವಿಸುತ್ತೇನೆ.