ಮೆಲ್ಬರ್ನ್: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ 36 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಅಂತರ್ ರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದು. ಫೈನಲ್ ವರ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ಮ್ಯಾಕ್ಸ್‌ವೆಲ್ ಮಹತ್ವದ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಇದನ್ನೂ ಓದಿ :ಸಿದ್ದರಾಮಯ್ಯರ ಹೆಸರಲ್ಲೇ ರಾಮ ಇದ್ದಾನೆ, ನಮಗೂ ರಾಮನ ಮೇಲೆ ಭಕ್ತಿ ಇದೆ; ಲಕ್ಷ್ಮೀ ಹೆಬ್ಬಾಳ್ಕರ್
ಗ್ಲೇನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ಪರ ಇಲ್ಲಿಯವರೆಗೆ 149 ಏಕದಿನ ಪಂದ್ಯಗಳನ್ನ ಆಡಿದ್ದು. ಒಟ್ಟು 3990ರನ್ ಕಲೆ ಹಾಕಿದ್ದಾರೆ. ಇದರ ನಡುವೆ ಒಂದು ದ್ವಿಶತಕ, ನಾಲ್ಕು ಶತಕ ಹಾಗೂ 23 ಅರ್ಧ ಶತಕಗಳನ್ನ ಬಾರಿಸಿದ್ದಾರೆ. ಇನ್ನು ಬೌಲಿಂಗ್ನಲ್ಲೂ ಅಮೋಘ ಕೊಡುಗೆ ನೀಡಿರುವ ಮ್ಯಾಕ್ಸ್‌ವೆಲ್ 3644ರನ್ಗಳನ್ನು ನೀಡುವ ಮೂಲಕ ಒಟ್ಟು 77 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದನ್ನೂ ಓದಿ :ಈ ಸಲ ಕಪ್ ನಮ್ದೇ; ಹರಕೆ ತೀರಿಸಿದ ಬಾಲಕಿ, ವಿಜಯ ದುರ್ಗ ಹೋಮ ಮಾಡಿಸಿದ ಶಾಸಕ