Thursday, August 21, 2025
Google search engine
HomeUncategorizedಹಿಂದೂ ಮುಖಂಡರಿಗೆ ಜೈಷ್​​ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ; ತಲೆ ಕಡಿಯುವುದಾಗಿ ಬೆದರಿಕೆ

ಹಿಂದೂ ಮುಖಂಡರಿಗೆ ಜೈಷ್​​ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ; ತಲೆ ಕಡಿಯುವುದಾಗಿ ಬೆದರಿಕೆ

ಮಂಗಳೂರು : ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ನಡುವೆ ಹಿಂದೂ ಮುಖಂಡರಿಗೆ ಜೈಷ್​-ಎ-ಮೊಹಮ್ಮದ್​ ಉಗ್ರ ಸಂಘಟನೆ ಹೆಸರಿನಲ್ಲಿ ಜೀವ ಬೆದರಿಕೆ ಬಂದಿದ್ದು. ವಾಟ್ಸಪ್​ನಲ್ಲಿ ಆಡಿಯೋ ಮೆಸಜ್​ ಕಳಿಸಿ ಬೆದರಿಕೆ ಹಾಕಿದ್ದಾರೆ. ಈ ಸಂದೇಶದಲ್ಲಿ ಹಿಂದೂ ಮುಖಂಡರ ತಲೆ ಕಡಿದು ದೆಹಲಿ ಗೇಟ್​ಗೆ ನೇತು ಹಾಕುತ್ತೇವೆ ಎಂದು ಹೇಳಿದ್ದಾರೆ.

ಸುಹಾಸ್​ ಶೆಟ್ಟಿ ಹತ್ಯೆ ನಡೆದ ಕೆಲವೇ ದಿನಗಳ ಅಂತರದಲ್ಲಿ ಮಂಗಳೂರಿನಲ್ಲಿ ರಹೀಂ ಎಂಬಾತನ ಕೊಲೆಯಾಗಿದೆ. ಇದರ ನಡುವೆ ಹಿಂದೂ ಮುಖಂಡರ ಕೊಲೆ ಮಾಡುವುದಾಗಿ ಬೆದರಿಕೆ ಕರೆಗಳು ಕೇಳಿ ಬರುತ್ತಿದ್ದು. ಹಿಂದು ಸಂಘಟನೆ ಮುಖಂಡರಿಗೆ ಜೈಷ್ ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ವಾಟ್ಸಪ್​ನಲ್ಲಿ ಆಡಿಯೋ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಇದನ್ನೂ ಓದಿ :‘ಧೈರ್ಯದಿಂದ ಆಟವಾಡಿ’; ಫೈನಲ್​ ಪಂದ್ಯಕ್ಕೂ ಮುನ್ನ RCB ಆಟಗಾರರಿಗೆ ಸಂದೇಶ ರವಾನಿಸಿದ ಮಲ್ಯ

ಆಡಿಯೋದಲ್ಲಿ ಏನಿದೆ..!

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಎಂಬವರಿಗೆ ಬೆದರಿಕೆ ಹಾಕಲಾಗಿದ್ದು. ಈ ಆಡಿಯೋದಲ್ಲಿ ‘ಹಲವು ಹಿಂದೂ ಮುಖಂಡರ ಲಿಸ್ಟ್​ ರೆಡಿ ಮಾಡಿದ್ದೇವೆ. ಅದರಲ್ಲಿ ನಿನ್ನ ಹೆಸರು ಹಿಟ್​ ಲೀಸ್ಟ್​ನಲ್ಲಿದೆ. ನಿನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದೇವೆ,  ಕೊಲೆಯಾದ ಸುಹಾಸ್ ಶೆಟ್ಟಿ ಕೂಡ ನಮ್ಮ ಲಿಸ್ಟ್​ನಲ್ಲಿದ್ದ. ಆದರೆ ಯಾರೋ ಒಳ್ಳೆಯ ಜನ ಅವನನ್ನು‌ ಕೊಂದು‌ ಹಾಕಿದ್ದಾರೆ. ನಿನ್ನ ಸ್ನೇಹಿತ ರಂಜಿತ್ ಎಂಬವನನ್ನು ಕೊಲ್ಲುತ್ತೇವೆ. ಇದನ್ನೂ ಓದಿ :ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಲಿಗಳ ಕಾಟ; ಬಾಳೆಹಣ್ಣು ತಿನ್ನುವ ವಿಡಿಯೋ ವೈರಲ್

ನಿಮನ್ನು ಸುಲಭವಾಗಿ ಕೊಲ್ಲುವುದಿಲ್ಲ, ಮೊದಲು ಕೈಕಾಲು ಕಡಿಯುತ್ತೇವೆ, ನಂತರ ತಲೆ ಕಡಿದು‌ ದೆಹಲಿಯ ಮೈನ್ ಗೇಟ್​ನಲ್ಲಿ ನೇತಾಡಿಸುತ್ತೇವೆ. ನಾವು ದೆಹಲಿಗೆ ಬಂದು ತಲುಪಿಯಾಗಿದೆ. ನಿನ್ನನ್ನು ಹೇಗೆ ಕೊಲ್ಲುತ್ತೇವೆ ಎಂದು ಅಲ್ಲಾನಿಗು ಗೊತ್ತಿರಲ್ಲ. ನಿನ್ನ ಕೊಂದ ರೀತಿಯನ್ನು ನೋಡಿ ಜನ ಕೊಲ್ಲುವ ವಿಧಾನವನ್ನೇ ಮರೆಯಲಿದ್ದಾರೆ, ಮುಸ್ಲಿಮರಿಗೆ ತೊಂದರೆ ಕೊಡೋದನ್ನು ಬಿಟ್ಟು ನಿನ್ನ ಬಗ್ಗೆ ಯೋಚಿಸು.

ಇದನ್ನೂ ಓದಿ :ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 36 ಹಸುಗಳ ರಕ್ಷಣೆ

ನಿಮ್ಮ ಪಾರ್ಟಿ ಅಥವಾ ಯಾವುದೇ ಮುಖಂಡರು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಜೊತೆಗೆ ನಿಮ್ಮ ಮುಖಂಡರನ್ನು ಮುಗಿಸಲಾಗುವುದು ಎಂದು ಜೈಷ್​-ಎ- ಮೊಹಮ್ಮದ್​ ಸಂಘಟನೆಯಿಂದ ಸಂದೇಶ ಬಂದಿದ್ದು. ಸಿರಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾದ ದೂರವಾಣಿ ಸಂಖ್ಯೆಗಳಿಂದ ಸಂದೇಶ ಬಂದಿವೆ. ಇದರ ಬಗ್ಗೆ ನರಸಿಂಹ ಮಾಣಿ ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments