ಹುಬ್ಬಳ್ಳಿ: ರಾತ್ರೋರಾತ್ರಿ ಹಸುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನ ಯುವಕರು ತಡೆದಿದ್ದು. ಸುಮಾರು 36 ಹಸುಗಳ ರಕ್ಷಣೆ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ, ಕಲಘಟಗಿ ಪಟ್ಟಣದಿಂದ ಹುಬ್ಬಳ್ಳಿ ಕಸಾಯಿಖಾನೆಗೆ ರಾತ್ರೋರಾತ್ರಿ ಸಾಗಿಸುತ್ತಿದ್ದ ದನ ಕರುಗಳನ್ನ ರಕ್ಷಿಸಿದ್ದು. ತಡರಾತ್ರಿ 12 ಗಂಟೆ ವೇಳೆಗೆ ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ತರುತ್ತಿದ್ದ 36 ದನಗಳನ್ನು ರಕ್ಷಣೆ ಮಾಡಲಾಗಿದೆ. ಹುಬ್ಬಳ್ಳಿಯ ಇರ್ಫಾನ್ ಗಾಂಡಾಪುರಿ ಎಂಬಾತ ಬೊಲೆರೋ ವಾಹನದಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ತಿಳಿದು ಬಂದಿದೆ. ಇದನ್ನೂ ಓದಿ :ಅಪ್ರಾಪ್ತ ಬಾಲಕಿಗೆ ಡ್ಯಾನ್ಸ್ ಮಾಸ್ಟರ್ನಿಂದ ಲೈಂಗಿಕ ಕಿರುಕುಳ; ಆರೋಪಿ ಬಂಧನ
ಹಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಿಷಯವನ್ನು ತಿಳಿದ ಕಲಘಟಗಿ ಪಟ್ಟಣದ ಪಟ್ಟಣದ ಯುವಕರು. ವಾಹನವನ್ನ ಅಡ್ಡಗಟ್ಟಿ ಹಸುಗಳನ್ನ ರಕ್ಷಿಸಿದ್ದು. ಬೊಲೆರೋ ಚಾಲಕನನ್ನ ಪೊಲೀಸ್ ವಶಕ್ಕೆ ನೀಡಿದ್ದಾರೆ. ಈ ವೇಳೆ ವಾಹನದ ಚಾಲಕ ಎಲ್ಲಾ ಹಸುಗಳು ಮಜೀದ್ ಬೇಪಾರಿ ಎಂಬಾತನಿಗೆ ಸೇರಿವೆ ಎಂದು ಹೇಳಿದ್ದಾನೆ.
ಇದನ್ನೂ ಓದಿ :ಹೃದಯಘಾತಕ್ಕೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಸಾ*ವು
ಘಟನೆ ಸಂಬಂಧ ಕಲಘಟಗಿ ಸಿಪಿಐ ಶ್ರೀ ಶೈಲ್ ಕೌಜಲಗಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು. ವಾಹನದೊಂದಿಗೆ ದನಕರುಗಳನ್ನು ವಶಕ್ಕೆ ತೆಗೆದುಕೊಂಡು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.