ಶ್ರೀಮಂತರಿಗೆ ಬಡವರ ನೋವಿನ ಅರಿವು ಇರಲ್ಲ. ಹಸಿವಿನ ನೋವು ಏನು ಅಂತ ಗೊತ್ತಿರಲ್ಲ. ತುತ್ತು ಅನ್ನ ತಿನ್ನೋಕೆ. ಬೊಗಸೆ ನೀರು ಕುಡಿಯೋಕೆ. ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೊಕೆ. ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ. ಹೌದು ಇದು ಒಪ್ಪೊತ್ತು ಅನ್ನ ಉಂಡು ಹಾಯಾಗಿ ಜೀವನವನ್ನು ಕಳೆಯುವ ಅದೆಷ್ಟೋ ಬಡವರ ಮನದಾಳದ ಮಾತು.
ಆದರೆ ಕೆಲವೊಮ್ಮೆ ಬಡತನ ಅನ್ನೊದು ಎಷ್ಟು ಕರಾಳವಾಗಿರುತ್ತದೆ ಅಂದರೆ. ಹಸಿವಿನ ಬೇಗೆಯನ್ನು ತಾಳಲಾರದೆ ಕಳ್ಳತನಕ್ಕೂ ಇಳಿಯುವಂತೆ ಮಾಡುತ್ತದೆ. ಕೇವಲ ಒಂದು ಪ್ಯಾಕೇಟ್ ಬಿಸ್ಕೆಟ್ ಕದ್ದ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಅಮಾನುಷವಾಗಿ ಹಲ್ಲೆ ಮಾಡಿ, ಕಾಲಿಗೆ ಹಲ್ಲೆ ನಡೆಸಿ ಎಳೆದೊಯ್ದಿರುವ ವಿಡಿಯೀ ಸಾಮಾಜಿಕ ಜಾಲತಾಂದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ಅನುಮಾನಸ್ಪದ ರೀತಿಯಲ್ಲಿ ಯುವತಿ ಶವ ಪತ್ತೆ: ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಶಂಕೆ
बिस्किट चुराने के जुर्म में इस व्यक्ति को बेरहमी से पाटा गया।
वीडियो रायपुर से है। pic.twitter.com/N5BraMAhie
— Priya singh (@priyarajputlive) July 26, 2024
ಇಂತಹ ಅಮಾನವೀಯ ಘಟನೆ ಛತ್ತೀಸ್‌ಗಢದ ರಾಯ್‌ಪುರದ ರೈಲ್ವೇ ನಿಲ್ದಾಣದಲ್ಲಿ ನಡೆದಿದ್ದು, ಕೇವಲ ಹಸಿವಿನ ದಾಹವನ್ನು ತೀರಿಸೋದಕ್ಕೆ ಈ ಯುವಕ ಒಂದು ಸಣ್ಣ ಬಿಸ್ಕೆಟ್ ಪ್ಯಾಕೇಟ್ ಕದ್ದಿದ್ದಾನೆ. ಇದನ್ನೇ ಮಹಾಪರಾಧ ಎಂದು ಪರಿಗಣಿಸಿರುವ ಕ್ಯಾಂಟೀನ್ ನೌಕರರು ಮತ್ತು ಮಾಲೀಕ ಆ ಯುವಕನಿಗೆ ಅಮಾನುಷವಾಗಿ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿ ಬಿದ್ದಿದ್ದ ಆತನ ಕಾಲಿಗೆ ಬಟ್ಟೆ ಕಟ್ಟೆ ಎಳೆದೊಯ್ದಿದ್ದಾರೆ. ಇದನ್ನೂ ಓದಿ:ಸಂಪ್ ಸ್ವಚ್ಚಗೊಳಿಸುತ್ತಿದ್ದ ಕಾರ್ಮಿಕರಿಬ್ಬರು ಸಾ*ವು: ಮತ್ತಿಬ್ಬರು ತೀವ್ರ ಅಸ್ವಸ್ಥ
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಕೋಟಿ-ಕೋಟಿ ಲೂಟಿ ಮಾಡಿ ಫಾರಿನ್ನಲ್ಲಿ ಆರಾಮಾಗಿರುವವರ ಮಧ್ಯೆ ಹೊಟ್ಟೆ ಹಸಿವು ನೀಗಿಸಲು ಒಂದು ಬಿಸ್ಕೆಟ್ ಕದ್ದಿದ್ದಕ್ಕೆ ಇಂತಹ ಶಿಕ್ಷೆಯ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.