ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ ಕೋವಿಡ್ -19 ಸೋಂಕು ದೃಢಪಟ್ಟ ಬೆನ್ನಲ್ಲೇ ಬಾಲಿವುಡ್ ನಟಿ ಶಿಲ್ಪ ಶಿರೋಡ್ಕರ್ಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಕುರಿತು ನಟಿ ತಮ್ಮ ಇನ್ಸ್ಟಗ್ರಾಂ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸನ್ರೈಸರ್ಸ್ ಆಟಗಾರ ಟ್ರಾವಿಸ್ ಹೆಡ್ಗೆ ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ಎಸ್ಆರ್ಎಸ್ ತಂಡದ ಮುಖ್ಯಕೋಚ್ ಡೇನಿಯಲ್ ವಿಕ್ಟೋರಿ ಮಾಹಿತಿ ನೀಡಿದ್ದರು. ಕೋವಿಡ್ ಪಾಸಿಟಿವ್ ಬಂದಿರುವ ಟ್ರಾವಿಸ್ ಹೆಡ್ ಇಂದು ಲಖ್ನೋ ವಿರುದ್ದ ನಡೆಯುವ ಪಂದ್ಯದಿಂದ ತಪ್ಪಿಸಿಕೊಂಡಿದ್ದಾರೆ. ಇದರ ನಡುವೆ ಬಾಲಿವುಡ್ ನಟಿ ಶಿಲ್ಪ ಶಿರೋಡ್ಕರ್ ಕೂಡ ತಮಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಸಂಪೂರ್ಣ ಗಾಜಾವನ್ನು ವಶಕ್ಕೆ ಪಡೆಯುತ್ತೇವೆ: ನೆತನ್ಯಾಹು ಮಹತ್ವದ ಘೋಷಣೆ
ಈ ಕುರಿತು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು. ಇದರಲ್ಲಿ, ‘ನಮಸ್ಕಾರ ಜನರೇ! ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಸುರಕ್ಷಿತವಾಗಿರಿ ಮತ್ತು ನೀವು ಮಾಸ್ಕ್ ಧರಿಸಿ! ‘ಶಿಲ್ಪಾ ಶಿರೋಧ್ಕರ್ ಪೋಸ್ಟ್ ಮಾಡಿದ್ದಾರೆ. ಇನ್ನು ಶಿಲ್ಪಾ ಶಿರೋಧ್ಕರ್ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಜಾಗೃತಿ ಮೂಡಿಸಿದ್ದಕ್ಕಾಗಿ ಅನೇಕರು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಇತರರು ತಮ್ಮ ದೈನಂದಿನ ಜೀವನದಲ್ಲಿ ಜಾಗರೂಕರಾಗಿರಲು ತಿಳಿಸಿದ್ದಾರೆ.ಸಿಂಗಾಪುರ ಮತ್ತು ಹಾಂಗ್ ಕಾಂಗ್ ಸೇರಿದಂತೆ ಹಲವಾರು ಏಷ್ಯಾದ ದೇಶಗಳಲ್ಲಿ ಇತ್ತೀಚಿನ ವಾರಗಳಲ್ಲಿ COVID-19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ:ಸಿಎಂ ಸಿಟಿ ರೌಂಡ್ಸ್ ಕ್ಯಾನ್ಸಲ್: ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಹಾನಿ ಪ್ರದೇಶ ವೀಕ್ಷಣೆ
ಮತ್ತೆ ಬಂತು ಮಾರಕ ಕೊರೋನಾ..!
ವರದಿ ಪ್ರಕಾರ, ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಕಂಡುಬಂದಿದ್ದು, ಮೇ 3ರ ವೇಳೆಗೆ ಸುಮಾರು 14,200 ಪ್ರಕರಣಗಳು ದಾಖಲಾಗಿವೆ. ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಇದು ಶೇ 28 ರಷ್ಟು ಹೆಚ್ಚಳವಾಗಿದೆ. ಚೀನಾದಲ್ಲಿ, ಕಳೆದ ಬೇಸಿಗೆಯಲ್ಲಿ ಸೋಂಕಿನ ಸಂಖ್ಯೆಗಳು ಕಡಿಮೆಯಾಗಿದ್ದು, ಏಪ್ರಿಲ್‌ನಲ್ಲಿ ಸಾಂಗ್‌ಕ್ರಾನ್ ಹಬ್ಬದ ನಂತರ ಥೈಲ್ಯಾಂಡ್‌ನಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗಿವೆ. ಜೊತೆಗೆ ಹಾಂಕ್ಕಾಂಗ್ ಮತ್ತು ಮಲೇಷಿಯಾದಲ್ಲೂ ಕೊವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ.