Saturday, August 23, 2025
Google search engine
HomeUncategorizedಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳ ಓಡಾಟ: ಪರಿಶೀಲಿಸುವಂತೆ ಕಮಿಷನರ್​ಗೆ ಬೆಲ್ಲದ್​ ಪತ್ರ

ಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳ ಓಡಾಟ: ಪರಿಶೀಲಿಸುವಂತೆ ಕಮಿಷನರ್​ಗೆ ಬೆಲ್ಲದ್​ ಪತ್ರ

ಹುಬ್ಬಳ್ಳಿ : ಶಾಸಕ ಅರವಿಂದ್​ ಬೆಲ್ಲದ್ ಹುಬ್ಬಳ್ಳಿಯಲ್ಲಿನ ಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಇದರ ಕುರಿತು ಪರಿಶೀಲಿಸುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು. ಈ ಪತ್ರ ಅವಳಿ ನಗರಕ್ಕೆ ಪಾಕಿಸ್ತಾನಿಗಳು ಕಾಲಿಟ್ಟಿದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೆ ಕಳೆದ ಮೇ. 17ರಂದು ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದ ಕೆಲ ಪ್ರದೇಶಗಳಲ್ಲಿ ಅಪರಿಚಿತರು ಓಡಾಡುತ್ತಿದ್ದಾರೆ. ನಗರದ ಕೆಲ ಮಸೀದಿಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳು ಓಡಾಟ ಹೆಚ್ಚಾಗಿದ್ದು. ಈ ಕುರಿತು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ :ಬೇಹುಗಾರಿಕೆ ಆರೋಪ: ವಿಚಾರಣೆ ವೇಳೆ ಜ್ಯೋತಿ ಕುರಿತು ಸ್ಪೋಟಕ ಮಾಹಿತಿ ಬಹಿರಂಗ

ಅವಳಿ ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ (ಜನ್ನತ್ ನಗರ ಧಾರವಾಡ ಸೇರಿದಂತೆ) ಅಪರಿಚಿತರು ವಾಸವಾಗಿದ್ದಾರೆಂಬ ಮಾಹಿತಿಯೂ ಇದೆ. ಮಸೀದಿಗಳಲ್ಲಿ ಓಡಾಡುತ್ತಿರುವರ ಪೈಕಿ  ಹೊಸ ಮುಖ, ಅಪರಿಚಿತ, ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅದಕ್ಕಾಗಿ ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ಇದರಿಂದ ಮಹಾನಗರದಲ್ಲಿ ಅಹಿತಕರ ಘಟನೆ ಆಗದಂತೆ ತಡೆಯುವ ಕೆಲಸ ಮಾಡಬೇಕೆಂದು ಶಾಸಕ ಬೆಲ್ಲದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments