Saturday, August 23, 2025
Google search engine
HomeUncategorizedಅಮೆರಿಕಾದ ಆಸ್ಪತ್ರೆ ಮುಂಭಾಗ ಬಾಂಬ್​ ಸ್ಪೋಟ: ಓರ್ವ ಸಾ*ವು, ನಾಲ್ವರಿಗೆ ಗಾಯ

ಅಮೆರಿಕಾದ ಆಸ್ಪತ್ರೆ ಮುಂಭಾಗ ಬಾಂಬ್​ ಸ್ಪೋಟ: ಓರ್ವ ಸಾ*ವು, ನಾಲ್ವರಿಗೆ ಗಾಯ

ಕ್ಯಾಲಿಫೋರ್ನಿಯಾ: ಅಮೇರಿಕಾ ಪಾಮ್​ಸ್ಪ್ರಿಂಗ್ಸ್ ನಗರದ ಕ್ಲಿನಿಕ್​ವೊಂದರ ಹೊರಗೆ ಬಾಂಬ್ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟು, ಕನಿಷ್ಠ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಅಮೇರಿಕಾ ಗುಪ್ತಚರ ಇಲಾಖೆ ಇದನ್ನು ಭಯೋತ್ಪಾದಕ ದಾಳಿ ಎಂದು ಕರೆದಿದ್ದು. ಸ್ಪೋಟದ ತೀವ್ರತೆಗೆ ಆಸ್ಪತ್ರೆ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ.

ಕ್ಯಾಲಿಪೋರ್ನಿಯಾ ನಗರದ ಮೇಯರ್ ರಾನ್ ಡಿಹಾರ್ಟೆ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ತನಿಖಾಧಿಕಾರಿಗಳು ಕ್ಲಿನಿಕ್ ಹೊರಗೆ ಬಾಂಬ್ ಸ್ಫೋಟಗೊಂಡಿರುವುದನ್ನು ದೃಢಪಡಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಕ್ಲಿನಿಕ್ ಬಳಿ ವ್ಯಕ್ತಿಯೊಬ್ಬನ ಮೃತದೇಹ ನೋಡಿದ್ದೇವೆ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ :ಹಳೆ ವೈಶಮ್ಯ: ಗಾಂಜಾ ಮಾರದಂತೆ ಬುದ್ದಿ ಹೇಳಿದ್ದಕ್ಕೆ ಕೊ*ಲೆ

ಇನ್ನು ಇದರ ಕುರಿತು ಲಾಸ್​ ಏಂಜಲೀಸ್​ ಏಫ್​ಬಿಯ ಕಛೇರಿಯ ಮುಖ್ಯಸ್ಥ ಆಕಿಲ್​ ಡೇವಿಸ್​ ಹೇಳಿಕೆ ನೀಡಿದ್ದು. “ಇದು ಉದ್ದೇಶಪೂರ್ವಕ ಭಯೋತ್ಪಾದನಾ ಕೃತ್ಯ. ಸ್ಫೋಟದಿಂದ ಕ್ಲಿನಿಕ್ ಬಳಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ. ಮೃತರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಫೋಟದ ಕೇಂದ್ರಬಿಂದುವಿನಿಂದ ಸ್ವಲ್ಪ ದೂರದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನದ ಸುಟ್ಟ ಅವಶೇಷಗಳು ಬಿದ್ದಿವೆ. ಹತ್ತಿರದ ಹಲವಾರು ಕಟ್ಟಡಗಳ ಛಾವಣಿಗಳು ಹಾನಿಗೊಳಗಾಗಿವೆ, ಇದು ಸ್ಫೋಟದ ತೀವ್ರತೆಯನ್ನು ಸೂಚಿಸುತ್ತದೆ. ಕ್ಲಿನಿಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಬಾಂಬ್​ ಸ್ಫೋಟ ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಮತ್ತು ಅದರ ಪ್ರಯೋಗಾಲಕ್ಕೆ ಹಾನಿಯಾಗಿಲ್ಲ. ಎಲ್ಲಾ ಉಪಕರಣಗಳು ಸಂಪೂರ್ಣವಾಗಿ ಸುರಕ್ಷಿತ ಮತ್ತು ಹಾನಿಗೊಳಗಾಗದೆ ಉಳಿದಿದೆ” ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ:ತರಬೇತಿ ನೀಡುವ ನೆಪದಲ್ಲಿ ಮಹಿಳಾ ಗೃಹರಕ್ಷಕ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ

ಫೆಡರಲ್ ಏಜೆಂಟ್‌ಗಳು ನಿಖರವಾಗಿ ಏನಾಯಿತು ಎಂಬುದನ್ನು ನಿರ್ಧರಿಸಲು ತನಿಖೆ ನಡೆಸುತ್ತಿದ್ದಾರೆ. ಫಲವತ್ತತೆ ಚಿಕಿತ್ಸಾಲಯದ ಮೇಲಿನ ಹಿಂಸಾಚಾರದ ಕೃತ್ಯ ಕ್ಷಮಿಸಲಾಗದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಟಾರ್ನಿ ಜನರಲ್ ಪ್ಯಾಮ್ ಬಾಂಡಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments