Sunday, August 24, 2025
Google search engine
HomeUncategorizedಕನ್ನಡಮ್ಮನಿಗೆ ಅಶ್ಲೀಲ ಭಾಷೆ ಬಳಸಿ ಅಪಮಾನ: ಹದ್ದು ಮೀರಿದ ಅನ್ಯಭಾಷಿಕರ ಪುಂಡಾಟ

ಕನ್ನಡಮ್ಮನಿಗೆ ಅಶ್ಲೀಲ ಭಾಷೆ ಬಳಸಿ ಅಪಮಾನ: ಹದ್ದು ಮೀರಿದ ಅನ್ಯಭಾಷಿಕರ ಪುಂಡಾಟ

ಬೆಂಗಳೂರು : ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿರುವ ಅನ್ಯಭಾಷಿಕರ ವರ್ತನೆ ಹದ್ದು ಮೀರಿದ್ದು. ಕೋರಮಂಗಲದ ಹೋಟೆಲ್​ ಒಂದರ ಡಿಸ್ಪ್ಲೇ ಬೋರ್ಡ್​ನಲ್ಲಿ ಕನ್ನಡಿಗರನ್ನು ಕೆಟ್ಟ ಕೊಳಕು ಭಾಷೆಯನ್ನ ಬಳಸಿ ಅವಮಾನಿಸಲಾಗಿದೆ. ಕನ್ನಡಿಗರ ತಾಯಿಗೆ ಅವಮಾನಿಸಲಾಗಿದೆ.

ಕೆಲಸಕ್ಕೆ ಎಂದು ವಿವಿಧ ರಾಜ್ಯಗಳಿಂದ ಬರುವ ಅನ್ಯಭಾಷಿಕರನ್ನು ಕರುಣೆಯಿಂದ ಸ್ವಾಗತಿಸಿ ಸಲಹುವ ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ವಿಂಗ ಕಮಾಂಡರ್​ ಶಿಲಾಧಿತ್ಯ ಬೋಸ್​ ಎಂಬಾತ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಕನ್ನಡಿಗರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದ. ಇದರ ಬೆನ್ನಲ್ಲೇ ಸೋನು ನಿಗಮ್​ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರನ್ನು ಪಹಲ್ಗಾಂನಲ್ಲಿನ ಉಗ್ರರಿಗೆ ಹೋಲಿಸಿದ್ದರು. ಇದನ್ನೂ ಓದಿ :ತಿರುಪತಿ ತಿಮ್ಮಪ್ಪನಿಗೆ 3.63 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ನೀಡಿದ ಸಂಜೀವ್​ ಗೋಯೆಂಕಾ

ಇದರ ನಡುವೆ ಕೋರಮಂಗಲದ ಹೋಟೆಲ್​ ಒಂದರಲ್ಲಿ ಕನ್ನಡಿಗರನ್ನು ಕುರಿತು ಅಶ್ಲೀಲವಾಗಿ ಬರೆದಿರುವ ಬೋರ್ಡ್ ಡಿಸ್ಪ್ಲೇ ಮಾಡಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITE ನ ಡಿಸ್ಪ್ಲೇ ಬೋರ್ಡ್​ನಲ್ಲಿ ಕನ್ನಡಿಗರ ತಾಯಿಗೆ ಅವಮಾನವಾಗುವಂತ ಅಶ್ಲೀಲ ಬರಹವನ್ನ ಪ್ರದರ್ಶಿಸಿದ್ದು. ನಿನ್ನೆ(ಮೇ.16) ರಾತ್ರಿ ಹೋಟೆಲ್​ನ ಡಿಸ್ಪ್ಲೇ ಬೋರ್ಡ್​ನಲ್ಲಿ ಇಂತಹ ಬರಹ ಕಂಡುಬಂದಿದೆ. ಬೇಕಂತಲೇ ಇಂತಹ ಅತಿರೇಕದ ವರ್ತನೆಯನ್ನ ಪ್ರದರ್ಶಿಸಿದ್ದು. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ :ವಿಶ್ವಗುರುವನ್ನ ದೇಶ ದ್ರೋಹಿ ಎಂದು ಜೈಲಿಗೆ ಹಾಕಬೇಕು: ಎಂ. ಲಕ್ಷ್ಮಣ್​​

ಆರೋಪಿ ಬಂಧನ..!

ಘಟನೆ ಸಂಬಂಧ ಮಡಿವಾಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು. ಹೋಟೆಲ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಅಬ್ದುಲ್​ ಸಮಾದ್​​ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments