ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ವಿವಾದಾತ್ಮಕ ಹೇಳಿಕೆಯ ನಡುವೆ ಮಧ್ಯ ಪ್ರದೇಶದ ಡಿಸಿಎಂ ಜಗದೀಶ್ ದೇವ್ಡಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು.”ಇಡೀ ದೇಶ, ದೇಶದ ಸೇನೆ ಮತ್ತು ಸೈನಿಕರು ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ನಮಸ್ಕರಿಸುತ್ತಾರೆ” ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಗದೀಶ್ ದೇವ್ಡಾ “ಕಾಶ್ಮೀರಕ್ಕೆ ಹೋದ ಪ್ರವಾಸಿಗರನ್ನು ಅವರ ಧರ್ಮವನ್ನು ಕೇಳಿ ಕೊಂದಿದ್ದು ಮನಸ್ಸಿನಲ್ಲಿ ತುಂಬಾ ಕೋಪವಿತ್ತು. ಮಹಿಳೆಯರನ್ನು ಪಕ್ಕಕ್ಕೆ ನಿಲ್ಲಿಸಿ ಅವರ ಮುಂದೆ ಗುಂಡು ಹಾರಿಸಲಾಯಿತು. ಮಕ್ಕಳ ಮುಂದೆಯೇ ಗುಂಡು ಹಾರಿಸಲಾಯಿತು. ಆ ದಿನದಿಂದ, ಇಡೀ ದೇಶದ ಮನಸ್ಸಿನಲ್ಲಿ ಉದ್ವಿಗ್ನತೆ ಇತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವವರೆಗೆ, ತಾಯಂದಿರ ಸಿಂಧೂರ ಒರೆಸಿದ ಜನರನ್ನು ಕೊಲ್ಲುವವರೆಗೆ, ನಾವು ಶಾಂತಿಯಿಂದ ಉಸಿರಾಡಲು ಸಾಧ್ಯವಾಗುವುದಿಲ್ಲ” ಎಂದು ದೇವ್ಡಾ ಭಾವನಾತ್ಮಕವಾಗಿ ಹೇಳಿದರು. ಇದನ್ನೂ ಓದಿ:ಪಾಪಿ ಪಾಕಿಸ್ತಾನ ಮತ್ತು ಮಿತ್ರ ರಾಷ್ಟ್ರಗಳಿಗೆ ಹಣ್ಣು ಕಳಿಸೋದಿಲ್ಲ: ರೈತರಿಂದ ದಿಟ್ಟ ನಿರ್ಧಾರ
ಮುಂದುವರಿದು ಮಾತನಾಡದ ದೇವ್ಡಾ “ಆಪರೇಷನ್ ಸಿಂಧೂರ್ ಕಾರ್ಯಚರಣೆಯನ್ನ ಯಶಸ್ವಿಯಾಗಿ ನಡೆಸಿದ ಪ್ರಧಾನಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಮತ್ತು ಅನೇಕ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದರು. ಇಂತಹ ಯಶಸ್ವಿ ಕಾರ್ಯಚರಣೆ ನಡೆಸಿದ ಮೋದಿ ಧನ್ಯವಾದ ಹೇಳಲು ಬಯಸುತ್ತೇವೆ. ‘ಇಡೀ ದೇಶ, ದೇಶದ ಸೈನ್ಯ, ಸೈನಿಕರು ಅವರ ಪಾದಗಳಿಗೆ ನಮಸ್ಕರಿಸುತ್ತಾರೆ. ಅವರು ನೀಡಿದ ಉತ್ತರವನ್ನು ಎಷ್ಟು ಹೊಗಳಿದರೂ ಸಾಲದು” ಎಂದು DCM ಜಗದೀಶ್ ದೇವ್ಡಾ ಹೇಳಿದರು. ಇದನ್ನೂ ಓದಿ :ವಿಶ್ವ ರಕ್ತದೊತ್ತಡ ದಿನ: ಆರೋಗ್ಯ ಕಾಪಾಡಲು ರಾಜೀವ್‌ಗಾಂಧಿ ವಿವಿಯಿಂದ ಜಾಗೃತಿ ಕಾರ್ಯಕ್ರಮ
ಕಾಂಗ್ರೆಸ್ನಿಂದ ತೀವ್ರ ಆಕ್ಷೇಪ..!
ಜಗದೀಶ್ ದೇವ್ಡಾ ಹೇಳಿಕೆಗೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಮುಗಿಬಿದಿದ್ದು. “ಸೇನೆಯನ್ನು ರಾಜಕೀಯಕ್ಕೆ ಎಳೆದು ತರುವುದು ತಪ್ಪು ಮತ್ತು ಈ ಹೇಳಿಕೆ ಸೇನೆಯ ಘನತೆಗೆ ಅವಮಾನದಂತಿದೆ. ಈ ಹೇಳಿಕೆ ಕೊಟ್ಟ ಸಚಿವರು ತಕ್ಷಣವೇ ಕ್ಷಮೆಯಾಚಿಸಬೇಕು. ಸೇನೆಯು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತದೆ. ಮತ್ತು ಯಾವುದೇ ನಿರ್ದಿಷ್ಟ ವ್ಯಕ್ತಿಗೆ ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.