ಬೆಂಗಳೂರು: ಆಪರೇಷನ್ ಸಿಂಧೂರ ವಿಜಯೋತ್ಸವ ಆಚರಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದು. ಬಂಧಿತ ಆರೋಪಿಯನ್ನ 26 ವರ್ಷದ ಶುಭಾಂಶು ಶುಕ್ಲಾ ಎಂದು ಗುರುತಿಸಲಾಗಿದ್ದು.
ಛತ್ತೀಸಗಡ ಮೂಲದ ಶುಭಾಂಶು ಶುಕ್ಲ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದನು. ವೈಟ್ಫಿಲ್ಡ್ನ ಪ್ರಶಾಂತ್ ಲೇಔಟ್ನಲ್ಲಿ ಪಿಜಿಯೊಂದರಲ್ಲಿ ವಾಸಿಸುತ್ತಿದ್ದ ಈತ ಮೇ,09ರಂದು ನಡೆದ ಆಪರೇಷನ್ ಸಿಂಧೂರ್ ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ. ಇದನ್ನೂ ಓದಿ :ಸುಪ್ರೀಂ ಕೋರ್ಟ್‌ನ 52ನೇ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ಬಿ ಆರ್ ಗಾವಾಯಿ ನೇಮಕ
ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದು ಪಾಕಿಸ್ತಾನ ಪರ ಜೋರಾಗಿ ಘೋಷಣೆ ಕೂಗಿದ್ದಾನೆ. ಈ ವೇಳೆ ಆತಂಕಗೊಂಡ ಕೆಲ ಪಿಜಿ ಯುವಕರು ಹೊರಬಂದು ನೋಡಿದಾಗ ಶುಭಾಂಶು ಬಾಲ್ಕನಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಈ ವೇಳೆ ಪಿಜಿಯಲ್ಲಿದ್ದ ಯುವಕರು ಉಗ್ರರೇ ಬಂದಿದ್ದಾರೆ ಎಂದು ಗಾಬರಿಯಾಗಿದ್ದು. ಬಳಿಕ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ವೈಟ್‌ಫೀಲ್ಡ್ ಪೊಲೀಸರು ಆತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ :ಮುಂದಿನ RCB ಪಂದ್ಯಕ್ಕೆ ಬಿಳಿ ಜರ್ಸಿ ಧರಿಸಿ ಬರಲು ಅಭಿಮಾನಿಗಳಿಂದ ಅಭಿಯಾನ