Tuesday, August 26, 2025
Google search engine
HomeUncategorizedಯುದ್ದದ ಸನ್ನಿವೇಶವಿದೆ; ಧವಸ, ಧಾನ್ಯ ಎಷ್ಟಿದೆ ಎಂಬ ಬಗ್ಗೆ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್​

ಯುದ್ದದ ಸನ್ನಿವೇಶವಿದೆ; ಧವಸ, ಧಾನ್ಯ ಎಷ್ಟಿದೆ ಎಂಬ ಬಗ್ಗೆ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್​

ಬೆಂಗಳೂರು : ಗೃಹ ಸಚಿವ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದು. ದೇಶದಲ್ಲಿ ಯುದ್ದದ ಸನ್ನಿವೇಶವಿದೆ. ಒಂದು ವೇಳೆ ಯುದ್ದವಾದರೆ ಅಂತಹ ಸಂದರ್ಭದಲ್ಲಿ ಹೇಗೆ ನಿಭಾಯಿಸಬೇಕು ಎಂದು ಚರ್ಚಿಸಲು ಸಭೆ ಕರೆದಿದ್ದಾರೆ. ಯುದ್ದವಾದರೆ ನೀರು, ಆಸ್ಪತ್ರೆ, ಧವಸ-ಧಾನ್ಯ ಇವೆಲ್ಲ ನಮ್ಮಲ್ಲಿ ಮ್ಯಾನೇಜ್​ ಮಾಡೋ ಅಷ್ಟು ಇದೆಯಾ ಎಂದು ಹೇಳಿದರು.

ದೇಶದಲ್ಲಿರುವ ಯುದ್ದದ ಕಾರ್ಮೋಡದ ಬಗ್ಗೆ ಮಾತನಾಡಿದ ಪರಮೇಶ್ವರ್ ‘ ಇಂದು ಸಂಜೆ ಸಿಎಂ ಸಭೆ ಕರೆದಿದ್ದಾರೆ. ಲಾ ಅಂಡ್ ಆರ್ಡರ್​ಗಿಂತ ದೇಶದಲ್ಲಿ ಯುದ್ಧದ ಭೀತಿ ಇದೆ. ಭಯೋತ್ಪಾದನೆ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಈ ಉದ್ವಿಘ್ನತೆ ಹೆಚ್ಚಾದರೆ ದೇಶದಲ್ಲಿ ಯುದ್ದದ ಪರಿಸ್ಥಿತಿ ಬರಬಹುದು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅದರಂತೆ ಕ್ರಮವಹಿಸಲು ಸೂಚನೆ ನೀಡಿದ್ದೇವೆ. ಇದನ್ನೂ ಓದಿ :ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಪಾಕಿಗಳ ಸುಳ್ಳಿಗೆ ಸ್ಪಷ್ಟನೆ ಕೊಟ್ಟ ವಿದೇಶಾಂಗ ಇಲಾಖೆ

ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಸೆಕ್ಯುರಿಟಿ ಹೆಚ್ಚು ಮಾಡಲಾಗಿದೆ. ಇಂತಹ ಚಟುವಟಿಕೆ ಯಾವ ಊರಲ್ಲಿ ನಡೆಯುತ್ತೆ ಅಂತ ಗೊತ್ತಾಗಲ್ಲ, ಹಾಗಾಗಿ ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಸಿಎಂ ಇಂದು ನಾಲ್ಕು ಗಂಟೆಗೆ ಸಭೆ ಕರೆದಿದ್ದಾರೆ. ಒಂದು ವೇಳೆ ಯುದ್ದದ ಸನ್ನಿವೇಶ ಬಂದರೆ ನೀರು, ಆಸ್ಪತ್ರೆ, ದವಸ ಧಾನ್ಯ ಇವೆಲ್ಲವನ್ನೂ ಹೇಗೆ ನಿಭಾಯಿಸೋದು, ಅವೆಲ್ಲಾ ನಮಲ್ಲಿ ಮ್ಯಾನೇಜ್ ಮಾಡೋ ಅಷ್ಟು ಇವೆಯಾ ಅಂತ ಪರಿಶೀಲನೆ ಮಾಡ್ತಾರೆ. ಈ ಸಭೆಯಲ್ಲಿ ಕಂದಾಯ ಸಚಿವರು ಭಾಗಿಯಾಗುತ್ತಾರೆ. ಎಲ್ಲದಕ್ಕೂ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಪೊಲೀಸರ ರಜೆ ಕಟ್​​..!

ಪೊಲೀಸರಿಗೆ ರಜೆ ಕಟ್ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್​ ‘ ಸದ್ಯಕ್ಕೆ ಪೊಲೀಸರಿಗೆ ರಜೆ ಇರೋದಿಲ್ಲ.
ಪರಿಸ್ಥಿತಿ ನಾರ್ಮಲ್ ಇಲ್ಲ, ಯಾವಾಗ ನಾರ್ಮಲ್​ಗೆ ಬರುತ್ತೆ ಗೊತ್ತಿಲ್ಲ. ಹಾಗಾಗಿ ಯಾರಿಗೂ ರಜೆ ಕೊಡ್ತಾ ಇಲ್ಲ. ಕರಾವಳಿ ಮಾತ್ರವಲ್ಲದೇ ಎಲ್ಲಾ ಕಡೆ ಇದೇ ರೂಲ್ಸ್​ ಇರಲಿದೆ. ಕೋಸ್ಟಲ್​ ಗಾರ್ಡ್​ಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ.

ಇದನ್ನೂ ಓದಿ :ಪಾಕಿಸ್ತಾನದ ಫತಾಹ್-II ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದ ಭಾರತ

ಕೋಸ್ಟಲ್​ ನೇವಿ, ಇಂಟರ್ ನ್ಯಾಷನಲ್ ಬಾರ್ಡರ್ ಎಲ್ಲವೂ ಕೇಂದ್ರದ ಬಾರ್ಡರ್​ಗಳಾಗಿವೆ. ಕೇಂದ್ರ ಗುಪ್ತಚರ ಇಲಾಖೆ ಏನಾದರು ಇತ್ತು ಅಂದರೆ ಹೇಳ್ತಾರೆ. ರಾಯಚೂರು, ಉತ್ತರ ಕನ್ನಡ, ಬೆಂಗಳೂರುನಲ್ಲಿ ಮಾಕ್​ಡ್ರಿಲ್ ನಡೆಸಲಾಗಿದೆ. ಹಾಗಂತ ಇವನ್ನ ಹಿಟ್​ ಲೀಸ್ಟ್​ ಅಂತ ಹೇಳೋದಕ್ಕೆ ಹಾಗಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments