ಭಾರತ-ಪಾಕ್ ನಡುವೆ ಕದನ ವಿರಾಮ ಇದರ ಬೆನ್ನಲ್ಲೇ ರಕ್ಷಣ ಸಚಿವಾಲಯ ಸುದ್ದಿಗೋಷ್ಟಿ ನಡೆಸಿದ್ದು. ಸುದ್ದಿಗೋಷ್ಟಿಯಲ್ಲಿ ಕಮಾಂಡರ್ ರಘು ಆರ್ ನಾಯರ್, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಭಾಗಿಯಾಗಿದ್ದರು.
ಈ ಕುರಿತು ಮಾತನಾಡಿದ ಕಮಾಂಡರ್ ರಘು ನಾಯರ್ ‘ಸಮುದ್ರ, ವಾಯು ಮತ್ತು ಭೂಮಿಯ ಮೇಲಿನ ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ದೃಡಪಡಿಸಿದರು. ಈ ಘೋಷಣೆಯು ಎರಡು ರಾಷ್ಟ್ರಗಳ ನಡುವೆ ನೇರವಾಗಿ ಕದನ ವಿರಾಮ ಜಾರಿಯಾಗಿದೆ ಎಂದು ಅವರು ದೃಡಪಡಿಸಿದರು.
ಇದನ್ನೂ ಓದಿ :ಭಾರತದ ದಾಳಿಗೆ ಹೆದರಿ ಅಮೆರಿಕಾ ಬಳಿ ಅಂಗಲಾಚಿದ ಪಾಕಿಸ್ತಾನ ವಿದೇಶಾಂಗ ಸಚಿವ..!
ಮುಂದುವರಿದು ಮಾತನಾಡಿದ ಕಮಾಂಡರ್ ರಘು ನಾಯರ್ “ವಿದೇಶಾಂಗ ಕಾರ್ಯದರ್ಶಿ ಹೇಳಿದಂತೆ, ಸಮುದ್ರ, ವಾಯು ಮತ್ತು ಭೂಪ್ರದೇಶದಲ್ಲಿನ ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಒಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಇದನ್ನು ಎಲ್ಲಾ ವಿಭಾಗ ಸೇನೆಯು ಪಾಲಿಸುತ್ತದೆ ಎಂದು ಹೇಳಿದರು”
ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ..!
ಭಾರತದ ಮಿಲಿಟರಿ ಆಸ್ತಿಗಳ ಕುರಿತು ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ಕುರಿತು ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ “ಭಾರತದ ಮಿಲಿಟರಿ ಆಸ್ತಿಗಳಿಗೆ ಹಾನಿಯಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಗಳನ್ನು ಸತ್ಯಕ್ಕೆ ದೂರವಾಗಿದೆ. ಇವುಗಳು ಸಂಪೂರ್ಣವಾಗಿ ಸುಳ್ಳು, ಪಾಕಿಸ್ತಾನದ ಜೆಎಫ್ -17 ಯುದ್ಧ ವಿಮಾನಗಳು ಭಾರತದ ಎಸ್ 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಬ್ರಹ್ಮೋಸ್ ಕ್ಷಿಪಣಿ ನೆಲೆಯನ್ನು ಹೊಡೆದುರುಳಿಸಿವೆ ಎಂದು ಪಾಕ್ ಆರೋಪಿಸಿದೆ. ಆದರೆ ಇವೆಲ್ಲಾ ಸುಳ್ಳು ಮಾಹಿತಿಗಳು ಎಂದು ಪಾಕಿಸ್ತಾನ ಆರೋಪಗಳನ್ನು ನಿರಾಕರಿಸಿದರು.
ಇದನ್ನೂ ಓದಿ :ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿ: ಭಾರತ ಸ್ಪಷ್ಟನೆ
ಇನ್ನು ಭಾರತದ ಹಲವಾರು ಪ್ರಮುಖ ನಗರಗಳ ವಾಯುನೆಲೆಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನ ನಡೆಸಿರುವ ದಾಳಿಯನ್ನ ತಿರಸ್ಕರಿಸಿದ ಭಾರತೀಯ ಸೇನೆ. “ಸಿರ್ಸಾ, ಜಮ್ಮು, ಪಠಾಣ್‌ಕೋಟ್, ಭಟಿಂಡಾ, ನಲಿಯಾ ಮತ್ತು ಭುಜ್‌ನಲ್ಲಿರುವ ನಮ್ಮ ವಾಯುನೆಲೆಗಳು ಹಾನಿಗೊಳಗಾಗಿವೆ ಎಂಬ ಪಾಕಿಗಳ ಆರೋಪ ಸತ್ಯಕ್ಕೆ ದೂರವಾಗಿದೆ ಮತ್ತು ಚಂಡೀಗಢ ಮತ್ತು ವ್ಯಾಸ್‌ನಲ್ಲಿರುವ ಮದ್ದು ಗುಂಡು ಡಿಪೋಗಳಿಗೆ ಹಾನಿಯಾಗಿದೆ ಎಂಬ ಪಾಕಿಸ್ತಾನದ ಆರೋಪಗಳು ಆಧಾರ ರಹಿತ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅಧಿಕಾರಿಗಳು “ಭಾರತವು ಜಾತ್ಯತೀತ ರಾಷ್ಟ್ರ ಮತ್ತು ನಮ್ಮ ಸೇನೆಯು ಭಾರತದ ಸಾಂವಿಧಾನಿಕ ಮೌಲ್ಯದ ಅತ್ಯಂತ ಸುಂದರ ಪ್ರತಿಬಿಂಬವಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅವರು ಹೇಳಿದರು.
ಸಾರ್ವಭೌಮತ್ವದ ರಕ್ಷಣೆಗೆ ಭಾರತ ಸಿದ್ದವಿದೆ..!
ಕದನ ವಿರಾಮದ ಕುರಿತು ಮಾತನಾಡಿದ ಕಮಾಂಡರ್ ರಘು. ನಾಯರ್ ‘ಪಾಕಿಸ್ತಾನದೊಂದಿಗೆ ಮಾಡಿಕೊಂಡ ಕದನ ವಿರಾಮ ಒಪ್ಪಂದಕ್ಕೆ ಭಾರತ ಬದ್ಧವಾಗಿರುತ್ತದೆಯಾದರೂ, ಭಾರತೀಯ ಸೇನೆಯು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಜಾಗರೂಕವಾಗಿದೆ. ಭಾರತ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸದಾ ಬದ್ದವಾಗಿದೆ ಎಂದು ಹೇಳಿದರು.