Wednesday, August 27, 2025
Google search engine
HomeUncategorized'ಪಹಲ್ಗಾಂನಲ್ಲಿ ಮೃತಪಟ್ಟವರಿಗೆ ನ್ಯಾಯ ಕೊಡಿಸಲು ಈ ದಾಳಿ ಪ್ರಾರಂಭಿಸಿದ್ದೇವೆ': ಭಾರತ ಸರ್ಕಾರ

‘ಪಹಲ್ಗಾಂನಲ್ಲಿ ಮೃತಪಟ್ಟವರಿಗೆ ನ್ಯಾಯ ಕೊಡಿಸಲು ಈ ದಾಳಿ ಪ್ರಾರಂಭಿಸಿದ್ದೇವೆ’: ಭಾರತ ಸರ್ಕಾರ

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಭಾರತ ‘ಆಪರೇಷನ್ ಸಿಂಧೂರ್’ ಎಂಬ ಕಾರ್ಯಚರಣೆ ನಡೆಸಿದ್ದು. ಈ ಕುರಿತು ಸ್ಪಷ್ಟನೆ ನೀಡಿದ ಸರ್ಕಾರ ಭಯೋತ್ಪಾದಕರಾದ ಅಜ್ಮಲ್ ಕಸಬ್ ಮತ್ತು ಡೇವಿಡ್ ಹೆಡ್ಲಿ ತರಬೇತಿ ಪಡೆದಿದ್ದ ಶಿಬಿರವನ್ನು ನಾಶಪಡಿಸಿವೆ ಎಂದು ಹೇಳಿದೆ.

ಇದನ್ನೂ ಓದಿ:ಆಪರೇಷನ್​ ಸಿಂಧೂರ್​ ಬೆನ್ನಲ್ಲೇ, ಆಪರೇಷನ್​ ಸಂಕಲ್ಪ: 15 ನಕ್ಸಲರ ಎನ್​ಕೌಂಟರ್​

ಆಪರೇಷನ್​ ಸಿಂಧೂರ್ ಬಗ್ಗೆ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ “ಪಹಲ್ಗಾಮ್ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಗಿದೆ, ಈ ದಾಳಿ ತೀವ್ರ ಸ್ವರೂಪದಲ್ಲ, ಆದರೆ ಭಯೋತ್ಪಾದಕರ ಮೂಲಸೌಕರ್ಯವನ್ನು ನಾಶಪಡಿಸಲು ಈ ದಾಳಿ ನಡೆಸಲಾಗಿದೆ ಎಂದು ಹೇಳಿದರು.

ದಾಳಿಗೊಳಗಾದ ಸೈಟ್‌ಗಳು ಯಾವುವು?

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ ಸರಣಿ ಕಾರ್ಯಚರಣೆ ನಡೆಸಿರುವುದಾಗಿ ಭಾರತ ಹೇಳಿರುವ ಒಂಬತ್ತು ಸ್ಥಳಗಳ ಪೈಕಿ, ನಾಲ್ಕು ಸ್ಥಳಗಳು ಉಗ್ರಗಾಮಿ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಎದ್ದು ಕಾಣುತ್ತವೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಆಪರೇಷನ್​ ಸಿಂಧೂರ ಬೆನ್ನಲ್ಲೇ ಪಾಕಿಗಳಿಂದ ಗುಂಡಿನ ದಾಳಿ: 7 ನಾಗರಿಕರು ಸಾವು, 38 ಜನರಿಗೆ ಗಾಯ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ, ಬಹವಾಲ್ಪುರ್ ಮತ್ತು ಮುರಿಡ್ಕೆ ದಾಳಿಯ ಗುರಿಗಳಲ್ಲಿ ಸೇರಿವೆ. ಭಾರತದ ರಾಜಸ್ಥಾನ ರಾಜ್ಯದ ಗಡಿಯ ಬಳಿ ಇರುವ ಬಹವಾಲ್ಪುರವನ್ನು ಅಧಿಕಾರಿಗಳು ಮಸೂದ್ ಅಜರ್ ನೇತೃತ್ವದ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದ್‌ನ ಭದ್ರಕೋಟೆ ಎಂದು ಗುರುತಿಸಿದ್ದಾರೆ . 1999 ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ಅಪಹರಿಸಿದ ನಂತರ ಒತ್ತೆಯಾಳು ವಿನಿಮಯದ ಸಮಯದಲ್ಲಿ ಭಾರತ ಬಿಡುಗಡೆ ಮಾಡಿದ ಮೂವರು ವ್ಯಕ್ತಿಗಳಲ್ಲಿ ಅಜರ್ ಕೂಡ ಒಬ್ಬರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments