ಬೆಂಗಳೂರು : ಹಲವಾರು ಕರ್ಮಕಾಂಡಗಳ ಅಡ್ಡೆಯಾಗಿರುವ ಕೆಪಿಎಸ್ಸಿ(KPSC) ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು. ಕೆಪಿಎಸ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ಯಾ ಎಂಬ ಅನುಮಾನ ಮೂಡಿದೆ. ಈ ಕುರಿತು ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.
ಸದಾ ಒಂದಿಲ್ಲ ಒಂದು ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿರುವ ಕೆಪಿಎಸ್ಸಿ ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಇಂದು ನಡೆಯುತ್ತಿರುವ ಕೆಎಎಸ್(KAS) ಪರೀಕ್ಷೆಯ ಮೇನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್: ಫಿಲ್ಮ ಛೇಂಬರ್ನಿಂದ ಅಧಿಕೃತ ಘೋಷಣೆ
ಕಸ್ತೂರ ಬಾ ನಗರ ಬಿಬಿಎಂಪಿ ಕಾಲೇಜಿನಲ್ಲಿ ಇಂತಹ ಆರೋಪ ಕೇಳಿ ಬಂದಿದ್ದು. ಪರೀಕ್ಷೆ ಕೊಠಡಿ ಸಂಖ್ಯೆ 4 ಹಾಗೂ 6ರಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ಓಪನ್ ಆಗಿರುವುದು ಕಂಡು ಬಂದಿದೆ. ಪ್ರಬಂಧ ಬರವಣಿಗೆಯ ಪ್ರಶ್ನೆ ಪತ್ರಿಕೆಯ ಬಂಡಲ್ ಓಪನ್ ಆಗಿದ್ದು. ಇದನ್ನು ನೋಡಿದ ಪರೀಕ್ಷ ಅಭ್ಯರ್ಥಿಗಳು ಅಧಿಕಾರಿಗಳ ಜೊತೆ ವಾಗ್ದಾದ ನಡೆದಿಸಿದ್ದಾರೆ. ಈ ಕುರಿತು ಸ್ಥಳದಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.


