Monday, September 1, 2025
HomeUncategorizedಬಂಡೀಪುರ ಉಳಿಸಿ ಅಭಿಯಾನ; ಪ್ರಿಯಾಂಕ ಗಾಂಧಿ ಬೇಡಿಕೆಗೆ ಪರಿಸರವಾದಿಗಳಿಂದ ಆಕ್ರೋಶ

ಬಂಡೀಪುರ ಉಳಿಸಿ ಅಭಿಯಾನ; ಪ್ರಿಯಾಂಕ ಗಾಂಧಿ ಬೇಡಿಕೆಗೆ ಪರಿಸರವಾದಿಗಳಿಂದ ಆಕ್ರೋಶ

ಚಾಮರಾಜನಗರ : ಗಡಿನಾಡು ಚಾಮರಾಜನಗರದಲ್ಲಿ ಬಂಡಿಪುರ ಉಳಿಸಿ (Save Bandipura) ಹೋರಾಟ ದಿನದಿಂದ ತೀವ್ರವಾಗುತ್ತಿದ್ದು. ರಾತ್ರಿ ಸಮಯದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡದಂತೆ ರೈತರು ಎಚ್ಚರಿಕೆ ನೀಡಿದ್ದಾರೆ. ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುವು ನೀಡಬೇಕು ಎಂದು ರಾಜ್ಯ ಸರ್ಕಾರ ಮೇಳೆ ಒತ್ತಡ ಏರಿದ್ದರು.

ಸದ್ಯ ಬಂಡೀಪುರ ಅರಣ್ಯದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೂ ವಾಹನ ಸಂಚಾರಕ್ಕೆ ನಿರ್ಬಂಧವಿದ್ದು. ತುರ್ತು ಅಗತ್ಯ ವಾಹನಗಳನ್ನು ಬಿಟ್ಟರೆ ಉಳಿದ ವಾಹನಗಳಿಗೆ ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಚುನಾವಣೆ ಸಮಯದಲ್ಲಿ ಬಂಡಿಪುರ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಮತದಾರರಿಗೆ ಅಶ್ವಾಸನೆ ನೀಡಿದ್ದರು. ಇದರ ಪ್ರತಿಫಲವಾಗಿ ಅವರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದರು.

ಇದನ್ನೂ ಓದಿ :ವಕ್ಫ್​ ಮಸೂದೆ ಹಿಂದುಳಿದ ಮುಸ್ಲಿಂರ ಉನ್ನತಿಗೆ ಸಹಕಾರಿಯಾಗಲಿದೆ; ಅಖಿಲ ಭಾರತ ಮುಸ್ಲಿಂ ಜಮಾತ್​

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತರು ಮತ್ತು ಪರಿಸರವಾದಿಗಳು ಬಂಡೀಪುರ ರಾತ್ರಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರೆ ಅದರಿಂದ ವನ್ಯ ಮೃಗಗಳ ಪ್ರಾಣಕ್ಕೆ ಸಂಚಾಕಾರ ಎದುರಾಗಲಿದೆ. ತಡರಾತ್ರಿ ವೇಳೆ ಕಾಡು ಪ್ರಾಣಿಗಳ ಮಾಂಸಕ್ಕಾಗಿ ಬೇಟೆ, ಶಿಕಾರಿ ಕೂಡ ಆರಂಭವಾಗಲಿದ್ದು. ಸ್ಮಗ್ಲಿಂಗ್ ಕೂಡ ಹೆಚ್ಚಲಿದೆ. ಆದ್ದರಿಂದ ಲೈಟ್​ ಬ್ಯಾನ್​ ತೆರವು ಮಾಡದಂತೆ ರೈತರು ಅಭಿಯಾನ ಶುರು ಮಾಡಿದ್ದಾರೆ.

ಇನ್ನು ಪ್ರಿಯಾಂಕ ಗಾಂಧಿ ಒತ್ತಡಕ್ಕೆ ಪ್ರತಿಕ್ರಿಯೆ ನೀಡಿದ್ದ ಅರಣ್ಯ ಸಚಿವ ಈಶ್ವರ್​ ಖಂಡ್ರೆ ಕೂಡ ಬಂಡೀಪುರದಲ್ಲಿ ರಾತ್ರ ಸಂಚಾರಕ್ಕೆ ಅನುವು ಮಾಡಿಕೊಡುವ ವಿಚಾರದ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದ್ದರು. ಒಂದು ವೇಳೆ ರಾಜ್ಯ ಸರ್ಕಾರ ಪ್ರಿಯಾಂಕ ಗಾಂಧಿ ಒತ್ತಡಕ್ಕೆ ಮಣಿದು ನಿರ್ಬಂಧವನ್ನು ತೆರವು ಮಾಡಿಬಿಡುತ್ತದೆ ಎಂದು ಆರೋಪಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾದ್ಯಕ್ಷ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು. ನಗರದ ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ.  ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments