ಮಂಗಳೂರು : ನ್ಯಾಯಾಧೀಶರೊಬ್ಬರು ಯುವ ವಕೀಲಗೆ ಈಡಿಯಟ್ ಎಂದಿದ್ದಕ್ಕೆ ನೊಂದ ವಕೀಲರು ನ್ಯಾಯಾಧೀಶರ ವಿರುದ್ದ ಪ್ರತಿಭಟನೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದ್ದು. ಮಂಗಳೂರಿನ 1ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ವಿರುದ್ದ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಯುವ ವಕೀಲೆಯೊಬ್ಬರು ತಪ್ಪು ಮಾಡಿದ್ದಕ್ಕೆ ಈಡಿಯಟ್ ಎಂದು ನ್ಯಾಯಾಧೀಶರು ಬೈದಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ವಕ್ಫ್ ಮಸೂದೆ ಹಿಂದುಳಿದ ಮುಸ್ಲಿಂರ ಉನ್ನತಿಗೆ ಸಹಕಾರಿಯಾಗಲಿದೆ; ಅಖಿಲ ಭಾರತ ಮುಸ್ಲಿಂ ಜಮಾತ್
ಕೋರ್ಟ್ ಆವರಣದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ತೊಟ್ಟು, ಕೆಲ ಸಮಯ ಮೌನವಾಗಿದ್ದು ಯುವ ವಕೀಲರು ಜಡ್ಜ್ ವಿರುದ್ದ ಪ್ರತಿಭಟಿಸಿದ್ದಾರೆ.