Monday, August 25, 2025
Google search engine
HomeUncategorizedನಾವು ಗೆದ್ದಾಗ ಕಾಂಗ್ರೆಸ್​ನವರ ಪ್ರಕಾರ ಮತಯಂತ್ರಗಳು ಸರಿ‌ ಇರಲ್ಲ: ಪ್ರಹ್ಲಾದ್​ ಜೋಶಿ

ನಾವು ಗೆದ್ದಾಗ ಕಾಂಗ್ರೆಸ್​ನವರ ಪ್ರಕಾರ ಮತಯಂತ್ರಗಳು ಸರಿ‌ ಇರಲ್ಲ: ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ : ದೆಹಲಿ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಹಿನ್ನಲೆ ಮಾಧ್ಯಮದ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿಕೆ ನೀಡಿದ್ದು. ಕುಣಿಲಾರದವರು ನೆಲ ಡೊಂಕು ಎಂಬ ಹಾಗೆ, ಕಾಂಗ್ರೆಸ್​ ಸೋತಾಗ ಇವಿಎಂ ಮೇಲೆ ಗೂಬೆ ಕೂರಿಸುತ್ತೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿಗೆ ಭರ್ಜರಿ ತೀರ್ಪು ಬರುತ್ತಿದೆ. ಪ್ರಸ್ತುತ ಟ್ರೆಂಡ್ ಗಳ ಮೂಲಕ 46ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಒಟ್ಟಾರೆ ಸ್ಥಿತಿಗತಿಗಳನ್ನ ಗಮನಿಸಿದರೆ ನಿಶ್ಚಳ‌ ಬಹುಮತ ಸಿಗುವ ಭರವಸೆ ಇದೆ. ಚುನಾವಣೆಯ ಮುಂಚೂಣಿ ವಹಿಸಿದ ಎಲ್ಲ‌ ನಾಯಕರಿಗೆ ಅಭಿನಂದನೆ‌ ಸಲ್ಲಿಸುತ್ತೇನೆ, ಆಡಳಿತ ಕೊಟ್ಟಾಗ ಹಾದಿ ಬೀದಿ‌ರಂಪ ಮಾಡುವವರಿಗೆ ಸರಿಯಾದ ಪೆಟ್ಟು ಜನ‌ಕೊಟ್ಟಿದ್ದಾರೆ. ಭ್ರಷ್ಟಾಚಾರದ ಆಂದೋಲನದ ಹಾದಿಯಲ್ಲಿ ಬಂದು ಭ್ರಷ್ಟಾಚಾರವನ್ನೇ ಮಾಡುವ ಮೂಲಕ ಆಮ್ ಆದ್ಮಿ ಅರಾಜಕತೆ ಸೃಷ್ಠಿ ಮಾಡಿದ್ದರು. ಆ ರೀತಿ ಮಾಡಿದವರಿಗೆ ಜನ ಸರಿಯಾದ ಕಪಾಳಮೋಕ್ಷ ಮಾಡಿದ್ದಾರೆ.

ಇದನ್ನೂ ಓದಿ :ದೇಶಕ್ಕೆ ಮೋದಿ ಅನಿವಾರ್ಯ ಎಂಬ ಸಂದೇಶ ಬಂದಿದೆ: ಆರ್​.ಅಶೋಕ್​  

ದೇಶದಲ್ಲಿ ಕಾಂಗ್ರೆಸ್​ ನಶಿಸಿ ಹೋಗುತ್ತಿದೆ !

ಕಾಂಗ್ರೆಸ್​ ಶೂನ್ಯ ಸಾಧನೆ ಬಗ್ಗೆ ಮಾತನಾಡಿದ ಜೋಶಿ ‘ ಈ ನಡುವೆ ದೇಶಾದ್ಯಂತ ಕಾಂಗ್ರೆಸ್ ನಶಿಸಿ ಹೋಗುತ್ತಿದೆ.
ಒಂದು ಪಕ್ಷ ಅತ್ಯಂತ ಹೀನಾಯವಾಗಿ‌ ಅಸ್ತಿತ್ವವನ್ನು ಕಳೆದುಕೊಳ್ಳಬಾರದು, ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ರಚನಾತ್ಮಕ‌ ವಿರೋಧ ಪಕ್ಷ ಇರಬೇಕು‌ಅನ್ನೋದು ನಮ್ಮ‌ ಆಶಯ. ಆದರೆ ಕಾಂಗ್ರೆಸ್ ದೇಶದಲ್ಲಿ ದಯನೀಯ ಸ್ಥಿತಿಗೆ ಬಂದು‌ ತಲುಪಿದೆ. ಇದನ್ನ‌ ಕಾಂಗ್ರೆಸ್ ಪಕ್ಷ‌ ಆತ್ಮಾವಲೋಕನ‌ ಮಾಡಿಕೊಳ್ಳಬೇಕು ಇದು ದೊಡ್ಡ ದುರ್ದೈವದ ಸಂಘತಿ ಎಂದು ಕಾಂಗ್ರೆಸ್​ ಬಗ್ಗೆ ಮರುಕ ವ್ಯಕ್ತಪಡಿಸಿದರು.

ಇದನ್ನೂ ಓದಿ :ಹಣ ಮತ್ತು ಮದ್ಯದ ಮೇಲೆ ಗಮನ ಹರಿಸಿ ಕೇಜ್ರಿವಾಲ್​ ಸೋತಿದ್ದಾನೆ: ಅಣ್ಣಾ ಹಜಾರೆ

ಸೋತಾಗ ಇವಿಎಂ ಮೇಲೆ ಗೂಬೆ ಕೂರಿಸುತ್ತಾರೆ !

ಇವಿಎಂ ಮಿಷಿನ್​ಗಳ ಮೇಲೆ ಕಾಂಗ್ರೆಸ್​ ಆರೋಪದ ಕುರಿತು ಮಾತನಾಡಿದ ಜೋಶಿ ‘ ಜಾರ್ಖಂಡ್ ನಲ್ಲಿ‌ ಬಿಜೆಪಿ‌ ಸೋತಾಗ ಮತ ಯಂತ್ರಗಳು ಸರಿ ಇದೆ, ಎಲ್ಲೆಲ್ಲಿ‌ ಅವರು ಗೆದ್ದಿದ್ದಾರೋ‌ ಅಲ್ಲಿ ಮತಯಂತ್ರಗಳು ಸರಿಯಿದೆ,
ಆದರೆ ನಾವು ಗೆದ್ದಾಗ ಅವರ ಪ್ರಕಾರ ಮತಯಂತ್ರಗಳು ಸರಿ‌ ಇರಲ್ಲ. ಕಾಂಗ್ರೆಸ್ ಪಕ್ಷ ಎಲ್ಲಿ‌ತಪ್ಪಿದೆ ಅನ್ನೋದು ತಿಳಿದುಕೊಳ್ಳಬೇಕು. ಇಡೀ ಜಗತ್ತಿನಲ್ಲಿ ಯಾವ ದೇಶದಲ್ಲೂ ಇಷ್ಟು ಬೇಗ ಫಲಿತಾಂಶ ಬರಲ್ಲ. ನಮ್ಮ‌ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ನಮ್ಮನ್ನು ರಾಜಕೀಯವಾಗಿ ಬಯ್ಯುವುದಾದರೆ ಬಯ್ಯಲಿ. ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಬಯ್ಯುತ್ತಾರೆ.

ಕುಣಿಯೋಕೆ ಬರಲಾರದವರು ನೆಲ‌ಡೊಂಕು‌ ಎಂದ ಹಾಗೆ ಕಾಂಗ್ರೆಸ್​ನ‌ ಮಾನಸಿಕತೆ ಇದೆ. ಕೈಲಾಗದವನು ಮೈ‌ಪರಚಿಕೊಂಡ ಎಂಬಂತೆ ಮಾನಸಿಕತೆ ಇದೆ. ಕಾಂಗ್ರೆಸ್ ಈ‌ ಮನಸ್ಥಿತಿಯಿಂದ ಹೊರಬರಬೇಕು. ಅವರನ್ನ ಯಾರು ಮಣ್ಣು ಮುಕ್ಕಿಸುತ್ತಾರೋ‌ ಅಂತವರ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತೆ. ಜಾರ್ಖಂಡ್ ನಲ್ಲಿ ಇವರನ್ನ ಸರ್ಕಾರದಲ್ಲಿ ಸೇರಿಸಿಕೊಳ್ಳಲು ಮುಂದಾಗಿದ್ದಿಲ್ಲ. ಪ್ರತಿಯೊಂದು‌ ರಾಜ್ಯದಲ್ಲೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತೆ. ಕಾಂಗ್ರೆಸ್ ಒಂದು ರೀತಿ ಬಸ್ ಸ್ಟ್ಯಾಂಡ್ ಇದ್ದ ಹಾಗೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments