Tuesday, August 26, 2025
Google search engine
HomeUncategorized17 ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿಸಿ ಮಾದರಿಯಾದ ಮಂಗಳಮುಖಿ !

17 ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿಸಿ ಮಾದರಿಯಾದ ಮಂಗಳಮುಖಿ !

ರಾಯಚೂರು : ಮಂಗಳಮುಖಿಯರು ಆದರೆ ಭಿಕ್ಷೆ ಬೇಡ್ತಾರೆ, ಜನರನ್ನ ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡ್ತಾರೆ ಅನ್ನೋ ಆರೋಪವಿದೆ. ಆದರೆ ಇದೆಲ್ಲವನ್ನೂ ಮೀರಿ ರಾಯಚೂರಿನಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಮಂಗಳಮುಖಿಯೊಬ್ಬರು ಬಡ ವಧು-ವರರ ಜೋಡಿಯ ಮದುವೆ ಮಾಡಿಸಿ ಸಾಮಾಜಿಕ ಕಾಳಜಿಯನ್ನು ಮರೆದಿದ್ದಾರೆ.

ಹೌದು.. ಮಂಗಳಮುಖಿಯರು ಅಂದರೆ ಈ ಸಮಾಜ ನೋಡುವ ದೃಷ್ಡಿಕೋನವೇ ಬೇರೆ. ಹೆಚ್ಚಾಗಿ ಭಿಕ್ಷಾಟನೆ ಮಾಡ್ತಾರೆ, ದುಡ್ಡು ಕೊಡದೇ ಇದ್ದರೆ ಹಲ್ಲೆ ಮಾಡ್ತಾರೆ, ದೌರ್ಜನ್ಯ ಮಾಡ್ತಾರೆ ಅನ್ನೋ ಮನಸ್ಥಿತಿ ಹಾಗೂ ಆರೋಪಗಳು ಎಲ್ಲೆಡೆಯಿವೆ. ಆದರೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಮಂಗಳಮುಖಿಯರು ಮಾತ್ರ ಇದೆಲ್ಲಕ್ಕೂ ವಿಭಿನ್ನವಾಗಿದ್ದಾರೆ. ನಿತ್ಯವೂ ರಸ್ತೆಗಳಲ್ಲಿ ನಿಂತು, ಅಂಗಡಿಯ ಮುಂದೆ ಹೋಗಿ ಭೀಕ್ಷೆ ಬೇಡಿ ತಂದ ಹಣ ಸಂಗ್ರಹಿಸಿಟ್ಟು, ಬಡ ಜೋಡಿಯ ಮದುವೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ :ಪ್ಯಾರಾಚೂಟ್ ಯಡವಟ್ಟು:13 ಸಾವಿರ ಅಡಿ ಮೇಲಿಂದ ಬಿದ್ದು ಏರ್​ಪೋರ್ಸ್​ ಅಧಿಕಾರಿ ಸಾ*ವು !

ಮಂಗಳ ಮುಖಿಯರ ಗುರುಮಾತೆ ಗುರು ಜಮುನಾ ನೇತೃತ್ವದಲ್ಲಿ ಮದ್ವೆ ನಡೆದಿದೆ. ಭಿಕ್ಷಾಟನೆ ಮಾಡುತ್ತಾ ಬಂದ ಹಣದಲ್ಲಿ‌ ಯಾರೊಬ್ಬರ ಸಹಾಯ ಪಡೆಯದೆ ಕಳೆದ ಐದು ವರ್ಷಗಳಲ್ಲಿ 17 ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ಜನರು ಸಹಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಹೆಚ್ಚು ಮದುವೆ ಮಾಡಿಸುವ ಅಭಿಲಾಷೆ ಹೊಂದಿದ್ದಾರೆ ಮಂಗಳಮುಖಿಯರು.

ಇನ್ನೂ ಸಿಂಧನೂರಿನ ಇಜೆ ಹೊಸಳ್ಳಿಯ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತೀ ವರ್ಷ ಈ ಒಂದು ಮದ್ವೆ ಶುಭಕಾರ್ಯ ನಡೆಸಲಾಗುತ್ತದೆ. ಈ ವರ್ಷವೂ ಕೂಡ ಐದು ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿದ್ದಾರೆ. ಅಲ್ಲದೇ ವಧು ವರರ ಕುಟುಂಬಸ್ಥರು ಭರ್ಜರಿ ಭೋಜನ ಸವಿದು, ನೂತನ ದಂಪತಿಗಳಿಗೆ ಆಶೀರ್ವದಿಸಿದ್ದಾರೆ. ಇಡೀ ಮದುವೆಯ ಖರ್ಚನ್ನು ತಾವೇ ಹೊತ್ತುಕೊಂಡಿದ್ದ ಮಂಗಳಮುಖಿಯರು ಯಾವುದೇ ಕೊರತೆಯಾಗದಂತೆ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ. ವಧುವಿಗೆ ತಾಳಿ, ಕಾಲುಂಗರ ಸೇರಿದಂತೆ ವಧು, ವರನ ವಸ್ತ್ರಗಳನ್ನ ತಾವೇ ಕೊಡಿಸಿ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಪ್ರತೀ ವರ್ಷವೂ ಕಡು ಬಡವರನ್ನ ಹುಡುಕಿ ಮದುವೆ ಮಾಡಿಸುವ ಸಂಪ್ರದಾಯ ಹೊತ್ತಿರುವ ಮಂಗಳಮುಖಿಯರ ಈ ಮಹಾತ್ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹುಟ್ಟುವಾಗ ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾದ ಮಂಗಳಮುಖಿಯರನ್ನು ಕಂಡ್ರೆ ಕೆಲ ಜನರಿಗೆ ಈಗಲೂ ತಾತ್ಸಾರ ಮನೋಭಾವ ಇದೆ. ಹೀಗಾಗೇ ಇತ್ತೀಚೆಗೆ ಕೆಲ ಮಂಗಳಮುಖಿಯರು ಸ್ವಾವಲಂಭಿ ಜೀವನ ನಡೆಸಲು ಮುಂದಾಗುತ್ತಿದ್ದಾರೆ. ಎಲ್ಲದರ ನಡುವೆ ಅವಮಾನ, ಅಪಮಾನಗಳನ್ನ ಮೆಟ್ಟಿ ನಿಂತು ಬಡವರ ಮದುವೆಗೆ ತಮ್ಮ ಹಣ ಬಳಸಿ ಸಾಮಾಜಿಕ ಜವಾಬ್ದಾರಿಯನ್ನ ಮೆರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments