Sunday, August 24, 2025
Google search engine
HomeUncategorizedಸರಳವಾಗಿ ಮಗನ ಮದುವೆ ಮಾಡಿ ಕ್ಷಮೆ ಕೇಳಿದ ಗೌತಮ್​ ಅದಾನಿ

ಸರಳವಾಗಿ ಮಗನ ಮದುವೆ ಮಾಡಿ ಕ್ಷಮೆ ಕೇಳಿದ ಗೌತಮ್​ ಅದಾನಿ

ಅಹಮ್ಮದಾಬಾದ್: ದೇಶದ ಎರಡನೇ ಶ್ರೀಮಂತ ಉದ್ಯಮಿ ಮತ್ತು ಅದಾನಿ ಗ್ರೂಪ್‌ನ ಮಾಲೀಕ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಫೆಬ್ರವರಿ 7 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಜ್ರ ವ್ಯಾಪಾರಿ ಜೈಮಿನ್​ ಶಾ ಅವರ ಪುತ್ರಿ ದಿವಾ ಜೈನಿನ್​ ಶಾ ಅವರನ್ನು ವರಿಸಿದ್ದಾರೆ ಎಂದು ತಿಳಿದು ಬಂದಿದೆ. ಕೇವಲ ಆಪ್ತರ ಸಮ್ಮುಖದಲ್ಲಿ ನಡೆದ ಈ ಮದುವೆ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ನೆರವೇರಿದೆ.

ಅದಾನಿ ಟೌನ್‌ಶಿಪ್ ಆದ ಶಾಂತಿಗ್ರಾಮದಲ್ಲಿ ನಡೆದ ಈ ಮದುವೆ ಸಾಂಪ್ರದಾಯಿಕ ಜೈನ ಮತ್ತು ಗುಜರಾತಿ ಸಂಪ್ರದಾಯಗಳನ್ನು ಅನುಸರಿಸಿ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು.

ಇದನ್ನೂ ಓದಿ :ಅಬಕಾರಿ ಹಗರಣದಿಂದ ಅಧಿಕಾರ ಕಳೆದುಕೊಳ್ತಾ ಆಮ್​ ಆದ್ಮಿ !

ಗೌತಮ್ ಅದಾನಿ ಈ ಹಿಂದೆ ಹೇಳಿದಂತೆ, ಹೈ-ಪ್ರೊಫೈಲ್ ಸೆಲೆಬ್ರಿಟಿ ಮದುವೆ ಇದಲ್ಲ ಎಂದಿದ್ದರು. ಜನಸಾಮಾನ್ಯರಂತೆ ಮದುವೆ ನಡೆಯಲಿದೆ. ನಮ್ಮ ಆಚರಣೆ, ಪದ್ಧತಿ ಜನಸಾಮಾನ್ಯರಂತೆ. ಹೀಗಾಗಿ ಮದುವೆ ಕೂಡ ಸರಳವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ನಡೆಯಲಿದೆ ಎಂದಿದ್ದರು. ಇದರಂತೆ ಮದುವೆ ಆಯೋಜಿಸಲಾಗಿತ್ತು.

ಗೌತಮ್ ಅದಾನಿ ಅವರೇ ತಮ್ಮ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಮದುವೆಯ ಪೋಟೊಗಳನ್ನು ಹಂಚಿಕೊಂಡಿದ್ದು.  ದೇವರ ಆಶೀರ್ವಾದದಿಂದ ಜೀತ್ ಮತ್ತು ದಿವಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹವು ಅಹಮದಾಬಾದ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಇದು ಸಣ್ಣ ಮತ್ತು ಅತ್ಯಂತ ಖಾಸಗಿ ಸಮಾರಂಭವಾಗಿದ್ದರಿಂದ, ನಾವು ಎಲ್ಲಾ ಶುಭಾಕಾಂಕ್ಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನಿಮ್ಮೆಲ್ಲರಿಂದ ನನ್ನ ಮಗಳು ದಿವಾ ಮತ್ತು ಜೀತ್‌ಗೆ ಪ್ರೀತಿ ಮತ್ತು ಆಶೀರ್ವಾದವನ್ನು ಹೃತ್ಪೂರ್ವಕವಾಗಿ ಬಯಸುತ್ತೇನೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments