ಮಧ್ಯಪ್ರದೇಶ್ : ಗುರುವಾರ(ಫೆ.06) ಮಧ್ಯಪ್ರದೇಶದ ಶಿವಪುರಿ ಬಳಿ ನಿಯಮಿತ ತರಬೇತಿ ಹಾರಾಟದಲ್ಲಿದ್ದಾಗ ಅವಳಿ ಆಸನಗಳ ಮಿರಾಜ್ 2000 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಆದರೆ ವಿಮಾನದಲ್ಲಿದ್ದ ಇಬ್ಬರು ಪೈಲೆಟ್ಗಳು ಹೊರಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ರಕ್ಷಣಾ ಸಚಿವಾಲಯ ಘಟನೆ ಬಗ್ಗೆ ತನಿಖೆ ನಡೆಸಲು ಸೂಚಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಬಿಸ್ಕೆಟ್ ಹಂಚಿ ಸಂಭ್ರಮಿಸಿದ ಆಟೋ ಡ್ರೈವರ್
ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ವಾಯುಪಡೆಯ ಮಿರಾಜ್ 2000 ಯುದ್ಧ ವಿಮಾನ ಗುರುವಾರ ಮಧ್ಯಾಹ್ನ 2:20 ರ ಸುಮಾರಿಗೆ ಪತನಗೊಂಡಿದೆ. ಶಿವಪುರಿಯ ಕರೈರಾ ತಹಸಿಲ್‌ನ ಸುನಾರಿ ಪೊಲೀಸ್ ಠಾಣೆ ತರಬೇತಿ ನಡೆಸುತ್ತಿದ್ದಾಗ ಪತನಗೊಂಡಿದೆ. ಘಟನಾ ಸ್ಥಳದಲ್ಲಿ ಬೆಂಕಿ ಮತ್ತು ಹೊಗೆ ಕಂಡು ಬಂದ ಹಿನ್ನಲೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.