ಹಾಸನ : 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು. ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಬಜೆಟ್ ಬಗ್ಗೆ ಹಾಸನ ಸಂಸದ ಶ್ರೇಯಸ್ ಪಟೇಲ್ ಹೇಳಿಕೆ ನೀಡಿದ್ದು. ಮೋದಿ ಸರ್ಕಾರ ಕೇಂದ್ರದ ಬಜೆಟ್ ಮಂಡನೆ ಮಾಡದೆ, ಬಿಹಾರದ ಬಜೆಟ್ ಮಂಡನೆ ಮಾಡಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಹಾಸನ ಸಂಸದ ಶ್ರೇಯಸ್ ಪಟೇಲ್ ಪ್ರತಿಕ್ರಿಯೆ ನೀಡಿದ್ದು. ‘ ನಾವು ಕೇಂದ್ರ ಬಜೆಟ್ ಮಂಡನೆಯಾಗುತ್ತೆ ಎಂದು ತಿಳಿದಿದ್ದೆವು, ಆದರೆ ವಿತ್ತೀಯ ಸಚಿವರು ಬಿಹಾರದ ಬಜೆಟ್ ಮಂಡನೆ ಮಾಡಿದ್ದಾರೆ. ನಿರ್ಮಲಾ ಸೀತರಾಮನ್ ಸಂಸತ್ತಿನಲ್ಲಿ ತೆಲುಗು, ತಮಿಳಿನಲ್ಲಿ ಮಾತನಾಡುತ್ತಿದ್ದರು. ಆದರೆ ಕರ್ನಾಟಕದಿಂದ ಆಯ್ಕೆಯಾಗಿದ್ದರು ಸಹ ಅವರು ಕನ್ನಡದಲ್ಲಿ ಮಾತನಾಡಲಿಲ್ಲ.
ಇದನ್ನೂ ಓದಿ :ಮೋದಿ ಲೆಕ್ಕ 2025 : ಯಾವುದು ಇಳಿಕೆ, ಯಾವುದು ಏರಿಕೆ, ಯಾವ ಇಲಾಖೆ ಎಷ್ಟು !
ಬಿಹಾರಕ್ಕೆ ಐಐಟಿ ಘೋಷಣೆ ಮಾಡಿದ್ದಾರೆ, ಎಲ್ಲವನ್ನು ಬಿಹಾರಕ್ಕೆ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕಕ್ಕೆ, ಹಾಸನಕ್ಕೆ ಅಕ್ಷರಷಃ ಅನ್ಯಾಯ ಮಾಡಿದ್ದು, ರಾಜ್ಯಕ್ಕೆ ಮಲತಾಯಿ ದೋರಣೆ ಮಾಡಿದ್ದಾರೆ. ಹಲವು ಯೋಜನೆಗಳನ್ನು ರಾಜ್ಯದಿಂದ ಕೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಯಾವುದೇ ಮನವಿಯನ್ನು ಪರಿಗಣಿಸಿಲ್ಲ ಎಂದು ಹೇಳಿದರು.