Friday, September 5, 2025
HomeUncategorizedಬಸ್​ ಮುಂಭಾಗದ ಗಾಜು ಒಡೆದು ಪುಂಡಾಟ ಮೆರೆದಿದ್ದ ಪುಡಿರೌಡಿ ಕಾಲಿಗೆ ಗುಂಡೇಟು

ಬಸ್​ ಮುಂಭಾಗದ ಗಾಜು ಒಡೆದು ಪುಂಡಾಟ ಮೆರೆದಿದ್ದ ಪುಡಿರೌಡಿ ಕಾಲಿಗೆ ಗುಂಡೇಟು

ಹಾಸನ: ಓವರ್ ಟೇಕ್ ಮಾಡಲು ಅವಕಾಶ ಕೊಡಲಿಲ್ಲ ಎಂಬ ಒಂದೇ ಕಾರಣಕ್ಕೆ ಬಸ್ ಅಡ್ಡಗಟ್ಟಿ ಮುಂದೆ ನಿಂತು ಪುಂಡಾಟ ಮೆರೆದಿದ್ದ ಪುಡಿ ರೌಡಿಗೆ ಹಾಸನ ಪೊಲೀಸರು ಗುಂಡೇಟು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಗುಂಡೇಟು ತಿಂದ ಆರೋಪಿಯನ್ನು ಮನು ಅಲಿಯಾಸ್​ ಮನೋಜ್​ ಗೌಡ ಎಂದು ಗುರುತುಸಲಾಗಿದೆ.

ಹಾಸನದಲ್ಲಿ ಪುಡಿರೌಡಿ ಗ್ಯಾಂಗ್​ ಕಟ್ಟಿಕೊಂಡು ಸಮಾಜಕ್ಕೆ ಮಾರಕವಾಗಿ ರೌಡಿಸಂ ಚಟುವಟಿಕೆಗಳಲ್ಲಿ ಭಾಗಿಯಾಗಿ ಪೊಲೀಸರಿಗೂ ತಲೆನೋವಾಗಿದ್ದ ಈ ರೌಡಿಶೀಟರ್ ಮೇಲೆ ಈ ಹಿಂದೆ ಒಂದು ಕೊಲೆ ಮತ್ತು ಮೂರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕೊಲೆ ಕೇಸ್​ನಲ್ಲಿ ಜೈಲು ಸೇರಿ ತಿಂಗಳ ಹಿಂದೆ ಬೇಲ್​ ಪಡೆದು ಹೊರ ಬಂದಿದ್ದ ಈತ ಸಾರ್ವಜನಿಕರಿಗೆ ಸಾಕಷ್ಟು ತಲೆ ನೋವಾಗಿದ್ದ.

ಆದರೆ ಇತ್ತೀಚೆಗೆ 28ನೇ ತಾರೀಕಿನಂದು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ಸುಗಮ ಟ್ರಾವೆಲ್ಸ್‌ನ ಬಸ್ ಹಾಸನದ ಸಮೀಪ ಬಂದಾಗ ಈತ ಆ ಬಸ್ ಹಿಂದೆ ಕಾರಿನಲ್ಲಿ ಸಂಚಾರ ಮಾಡ್ತಿದ್ದ. ರಸ್ತೆ ಕಿರುದಾಗಿದ್ದರಿಂದ ಈತನ ಕಾರಿಗೆ ಬಸ್ ಚಾಲಕ ಓವರ್ ಟೇಕ್ ಮಾಡಲು ಅವಕಾಶ ನೀಡಲು ಸಾಧ್ಯವಾಗಿಲ್ಲ. ಇಷ್ಟಕ್ಕೇ ಈ ಪುಂಡ ತನ್ನ ಕಾರನ್ನ ಬಸ್ಸಿಗೆ ಅಡ್ಡ ಹಾಕಿ ನಿಲ್ಲಿಸಿ ತನ್ನ ಕಾರಲ್ಲಿದ್ದ ಲಾಂಗ್ ನಿಂದ ಏಕಾಏಕಿ ಬಸ್ ಮುಂಬದಿಯ ಗ್ಲಾಸ್ ಗೆ ಬೀಸಿ ಜಕಂ ಮಾಡಿದ್ದ ಈ ವೀಡಿಯೋ ಪ್ರಯಾಣಿಕರೊಬ್ಬರ ನೊಬೈಲ್ ನಲ್ಲಿ ಸೆರೆಯಾಗಿ ಭಾರಿ ವೈರಲ್ ಕೂಡ ಆಗಿ ಆತನ ದರ್ಪ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ:ಪಿಕ್​ಅಪ್​ ವ್ಯಾನ್​ ಮತ್ತು ಟ್ರಕ್​​ ನಡುವೆ ಭೀಕರ ಅಪಘಾತ: 9 ಮಂದಿ ಸಾ*ವು, 11 ಜನರಿಗೆ ಗಾಯ

ಘಟನೆ ಕುರಿತು ಬಸ್​ ಚಾಲಕ ಹಾಸನ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ಹಾಸನಕ್ಕೆ ಕರೆತರುತ್ತಿದ್ದರು. ಈ ವೇಳೆ ಮಾರ್ಗಮಧ್ಯ ಮೂತ್ರ ವಿಸರ್ಜನೆ ಹೋಗಬೇಕು ಎಂದು ಹೇಳಿ ಗಾಡಿ ನಿಲ್ಲಿಸಿದ್ದ ಆರೋಪಿ. ಜೀಪಿನಿಂದ ಕೆಳಗೆ ಇಳಿದು ಓಡಿ ಹೋಗಲು ಯತ್ನಿಸಿದ್ದನು.

ಈ ವೇಳೆ ಈತನನ್ನು ಹಿಡಿಯಲು ಬಂದ ಪೊಲೀಸರ ಬೇಲೆ ಆರೋಪಿ ಮನು ಹಲ್ಲೆ ನಡೆಸಿ, ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಹಾಸನ ನಗರ ಇನ್ಸ್ಪೆಕ್ಟರ್ ಮೋಹನ್ ಕೃಷ್ಣ ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ ಇದನ್ನು ನಿರಾಕರಿಸಿ ತಪ್ಲಿಸಿಕೊಳ್ಳಲು ಹೋದ ಆರೋಪಿ ಮನು ಕಾಲಿಗೆ ಗುಂಡಿಕ್ಕಿದ್ದಾರೆ. ಗಾಯಗೊಂಡ ಆರೋಪಿ ಮನು ಮತ್ತು ಪೊಲೀಸ್ ಪೇದೆ ಲೋಕೇಶ್‌ಗೆ ಹಾಸನ ಹಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಒಟ್ಟಾರೆ ಬಹುದಿನಗಳಿಂದ ಜನರಿಗೆ ತೊಂದರೆ ಕೊಟ್ಟು ಸಮಾಜದ ನೆಮ್ಮದಿ ಹಾಳು ಮಾಡುತ್ತಿದ್ದ ಈ ಪುಡಿ ರೌಡಿಗೆ ಹೆಡೆಮುರಿ ಕಟ್ಟಲೆ ಬೇಕಿದ್ದ ಸ್ಥಿತಿಯಲ್ಲಿ ಬಸ್ ಮೇಲೆ ಹಲ್ಲೆ ಪ್ರಕರಣ ಸಾಕ್ಷಿಯಾಗಿ ಹಾಸನ ಪೊಲೀಸರು ಇಂತಹ ಕ್ರಿಮಿಗಳಿಗೆ ತಕ್ಕ ಉತ್ತರ ನೀಡಿದ್ದು ಕಾನೂನಿನಲ್ಲಿ ದೊಡ್ಡ ಶಿಕ್ಷೆ ಆಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments