Saturday, August 30, 2025
HomeUncategorized30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟ: ಮತ್ತೊಬ್ಬ ಜೂನಿಯರ್ ಪ್ರಜ್ವಲ್​ ರೇವಣ್ಣ ಪತ್ತೆ !

30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟ: ಮತ್ತೊಬ್ಬ ಜೂನಿಯರ್ ಪ್ರಜ್ವಲ್​ ರೇವಣ್ಣ ಪತ್ತೆ !

ದಾವಣಗೆರೆ : ಜಿಲ್ಲೆಯಲ್ಲೊಬ್ಬ ಜೂನಿಯರ್ ಪ್ರಜ್ವಲ್ ರೇವಣ್ಣ ಪತ್ತೆಯಾಗಿದ್ದು. ಮತ್ತೊಂದು ಸೆಕ್ಸ್​ ಕರ್ಮಕಾಂಡ ಬಯಲಿಗೆ ಬಂದಿದೆ. 30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟವಾಡಿ ವಿಡಿಯೋ ಚಿತ್ರಿಕರಿಸಿಕೊಂಡಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ‘

ಹೌದು.. ದಾವಣಗೆರೆ ನಗರದ 56 ವರ್ಷದ ಅಮ್ಜದ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಚೆನ್ನಗಿರಿಯಲ್ಲಿ ಮೆಡಿಕಲ್​ ಶಾಪ್ ನಡೆಸುತ್ತಿದ್ದ ಈತ ಮೆಡಿಕಲ್​ ಶಾಪ್​ಗೆ ಬರುವ ಶಾಲಾ ಮಕ್ಕಳು, ಕಾಲೇಜು ಯುವತಿಯರು, ಮಹಿಳೆಯರಿಗೆ ಹಣದ ಸಹಾಯ ಮಾಡಿ ಲೈಂಗಿಕ ಕ್ರಿಯೆಯಲ್ಲಿ ಬಳಸಿಕೊಳ್ಳುತ್ತಿದ್ದ. ಮೆಡಿಕಲ್​ಗೆ ಬರುವ ಮಹಿಳೆಯರನ್ನು ಪುಸಲಾಯಿಸಿ ಚೆನ್ನಗಿರಿಯ ಮನೆಯಲ್ಲಿ ಪಲ್ಲಂಗದಾಟ ಆಡುತ್ತಿದ್ದ. ಈ ವೇಳೆ ವಿಡಿಯೋ ಚಿತ್ರಿಕರಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕಸಾಯಿಖಾನೆ ಮೇಲೆ ಹಿಂದೂಪರ ಸಂಘಟನೆ ದಾಳಿ: ಎಂಟು ಹಸುಗಳ ಕಟಾವು, 6 ಹಸುಗಳ ರಕ್ಷಣೆ !

ಕೇವಲ ಅಷ್ಟೆ ಅಲ್ಲದೆ ರಸ್ತೆಯಲ್ಲಿ ಓಡಾಡುತ್ತಿರುವ ಮಹಿಳೆಯರನ್ನು, ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದನು ಎಂದು ತಿಳಿದು ಬಂದಿದೆ. ಇದೀಗ ಈ ಕ್ರಿಮಿಯನ್ನು ಪೊಲೀಸರು ಬಂಧಿಸಿದ್ದು. ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್​ 13/2025 ಕಲಂ: 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77, 294, 64 BNS ACT -2023 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ರೀತ್ಯಾ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಅಶ್ಲೀಲ ವಿಡಿಯೋಗಳ ಬಗ್ಗೆ ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದು. ವಿಡಿಯೋಗಳ ಬಗ್ಗೆ ತನಿಖೆ ಮಾಡಿ ಕೇಸ್ ದಾಖಲು ಮಾಡಿಕೊಂಡ ಕುರಿತು ಮಾಹಿತಿ ನೀಡಿದ್ದಾರೆ. ಜೊತೆಗೆ ಅಶ್ಲೀಲ ವಿಡಿಯೋಗಳನ್ನು ಯಾರಾದರೂ ಶೇರ್​ ಮಾಡಿದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments