Sunday, September 7, 2025
HomeUncategorizedಮಿಲ್ಕಿ ಬ್ಯೂಟಿ ಪ್ರೀತಿಗೆ ಮುಳ್ಳಾದ ಐಟಂ ಸಾಂಗ್​ಗಳು: ತಮ್ಮನ್ನಾ ,ವಿಜಯ್​ ವರ್ಮಾ ಬ್ರೇಕಪ್​ ?

ಮಿಲ್ಕಿ ಬ್ಯೂಟಿ ಪ್ರೀತಿಗೆ ಮುಳ್ಳಾದ ಐಟಂ ಸಾಂಗ್​ಗಳು: ತಮ್ಮನ್ನಾ ,ವಿಜಯ್​ ವರ್ಮಾ ಬ್ರೇಕಪ್​ ?

ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಬಾಯ್ ಫ್ರೆಂಡ್ ವಿಜಯ್ ವರ್ಮಾ ಜೊತೆ ಬ್ರೇಕಪ್ ಮಾಡ್ಕೊಂಡ್ರಾ? ಎಂಬ ಪ್ರಶ್ನೆಗಳು ಜನರನ್ನು ಕಾಡಲು ಶುರುಮಾಡಿವೆ. ಇದಕ್ಕೆ ಕಾರಣ ತಮ್ಮನ್ನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್​ ಅಭಿಮಾನಿಗಳಲ್ಲಿ ಈ ಪ್ರಶ್ನೆ ಮೂಡಲು ಕಾರಣವಾಗಿದೆ.

ಹೌದು ನಟಿ ತಮ್ಮನ್ನಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಸಲಿಗೆ ಆ ಪೋಸ್ಟ್‌ನಲ್ಲಿ ಏನಿದೆ ಅಂದ್ರೆ ‘ಪ್ರೀತಿಯನ್ನು ಸೀಕ್ರೆಟ್ ಆಗಿ ಇಡಬೇಕಾಗಿಲ್ಲ, ಮತ್ತೊಬ್ಬರಿಗೆ ಸೀಕ್ರೆಟ್ ಆಗಿ ಇಂಟ್ರೆಸ್ಟ್ ತೋರಿಸಬೇಕಾಗಿಲ್ಲ. ಒಬ್ಬರು ನಿಮ್ಮನ್ನು ಚೆನ್ನಾಗಿ ನೋಡಬೇಕಾದರೆ, ಮೊದಲು ನಿಮ್ಮ ಸುತ್ತ ಇರೋರನ್ನ ಚೆನ್ನಾಗಿ ನೋಡೋದು ಕಲಿಬೇಕು’ ಅಂತ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಲಿ ಶೇರ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದವರು ಅರೇ ಇದ್ದಕ್ಕಿಂದಂತೆ ಪ್ರೀತಿ ಬಗ್ಗೆ ತಮನ್ನಾ ಈ ರೀತಿ ಯಾಕೆ ಪೋಸ್ಟ್ ಮಾಡಿದರು. ಈ ಮೂಲಕ ಏನು ಹೇಳಲು ಹೊರಟಿದ್ದಾರೆ ಅಂತೆಲ್ಲಾ ಏನೇನೋ ಊಹಿಸಿಕೊಳ್ಳುತ್ತಿದ್ದಾರೆ.

ಐಟಂ ಸಾಂಗ್​ಗಳೆ ತಮ್ಮನ್ನ ಪ್ರೀತಿಗೆ ಮುಳುವಾದ್ವಾ !

2024ರ ಹೊಸ ವರ್ಷದ ಸಂಭ್ರಮದಲ್ಲಿ ತಮನ್ನಾ- ವಿಜಯ್ ವರ್ಮಾ ಲವ್ ಸ್ಟೋರಿ ರಿವೀಲ್ ಆಗಿತ್ತು. ಜೋಡಿ ಒಟ್ಟಿಗೆ ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಈ ವೀಡಿಯೋ ಲೀಕ್ ಆಗಿತ್ತು. ಬಳಿಕ ಇಬ್ಬರು ಈ ವಿಚಾರ ಒಪ್ಪಿಕೊಂಡಿದ್ದರು. ಇನ್ನು ಪ್ರೇಯಸಿಯನ್ನು ವಿಜಯ್ ವರ್ಮಾ ‘ಟಮಾಟರ್’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಇದನ್ನೂ ಓದಿ :ನೀಲಿ ಚಿತ್ರದ ಶೂಟಿಂಗ್​ ವೇಳೆ ಬಾಲ್ಕನಿಯಿಂದ ಬಿದ್ದು ಖ್ಯಾತ ನೀಲಿ ತಾರೆ ಸಾ*ವು !

ಇತ್ತೀಚೆಗೆ ತಮನ್ನಾ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯುವುದು ಹೆಚ್ಚಾಗಿದೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಸದ್ಯ ‘ಓಡೆಲ- 2’ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ನಟಿಸುತ್ತಿದ್ದಾರೆ. ಕಳೆದ ವರ್ಷ ಬಂದ ‘ಸ್ತ್ರೀ- 2’, ಜೈಲರ್​ ಹಾಗೂ ‘ವೇದ’ ಚಿತ್ರದ ಐಟಂ ಸಾಂಗ್‌ನಲ್ಲಿ ತಮನ್ನಾ ಮಿಂಚಿದ್ದರು. ಈ ಐಟಮ್ ಸಾಂಗ್‌ಗಳೇ ತಮನ್ನಾ ಪ್ರೀತಿಗೆ ಮುಳ್ಳಾದ್ವು ಅನ್ನೋ ಮಾತುಗಳು ಕೇಳಿ ಬರ್ತಿವೆ.

ಒಟ್ಟಾರೆಯಾಗಿ ತಮನ್ನಾ ಹೊಸ ಪೋಸ್ಟ್ ನೋಡಿ ಫ್ಯಾನ್ಸ್ ತಮನ್ನಾಗೆ ಏನೋ ಪ್ರಾಬ್ಲಮ್ ಆಗಿದೆ ಅಂತ ಬೇಜಾರ್ ಮಾಡ್ಕೊಳ್ತಿದ್ದಾರೆ. ಗೆಳೆಯನ ಜೊತೆ ಬ್ರೇಕಪ್ ಮಾಡ್ಕೊಂಡಿದ್ದಾರೆ ಅಂತ ಅಂದುಕೊಳ್ತಿದ್ದಾರೆ… ಆದರೆ ತಮನ್ನಾ ಮಾತ್ರ ಅಧಿಕೃತವಾಗಿ ಬ್ರೇಕಪ್ ಬಗ್ಗೆ ಹೇಳಿಲ್ಲ. ಇದರಲ್ಲಿ ಎಷ್ಟು ನಿಜ ಅಂತ ಗೊತ್ತಿಲ್ಲ. ಮುಂದೆ ಏನಾಗುತ್ತೆ ಅಂತ ನೋಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments