Saturday, August 30, 2025
HomeUncategorizedಕುಂಭಮೇಳ ಕಾಲ್ತುಳಿತ ಪ್ರಕರಣ: ಸ್ವಗ್ರಾಮದಲ್ಲಿ ನೆರವೇರಿದ ತಾಯಿ-ಮಗಳ ಅಂತ್ಯಸಂಸ್ಕಾರ !

ಕುಂಭಮೇಳ ಕಾಲ್ತುಳಿತ ಪ್ರಕರಣ: ಸ್ವಗ್ರಾಮದಲ್ಲಿ ನೆರವೇರಿದ ತಾಯಿ-ಮಗಳ ಅಂತ್ಯಸಂಸ್ಕಾರ !

ಬೆಳಗಾವಿ: ಪ್ರಯಾಗ್​ರಾಜ್​ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ತಾಯಿ ಮಗಳ ಅಂತ್ಯಸಂಸ್ಕಾರ ನೆರವೇರಿದೆ ಎಂದು ಮಾಹಿತಿ ದೊರೆತಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹೌದು.. ಉತ್ತರ ಪ್ರದೇಶದ ಪ್ರಯಾಗರಾಜ್ ಕಾಲ್ತುಳಿದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ಇದರಲ್ಲಿ ನಿನ್ನೆಯಷ್ಟೇ ಮಹಾದೇವಿ ಬಾವನೂರ ಮತ್ತು ಅರುಣ್ ಕೋರ್ಪಡೆ ಅಂತ್ಯಕ್ರಿಯೆ ನಡೆದಿತ್ತು. ಇಂದು ತಾಯಿ, ಮಗಳ ಅಂತ್ಯಕ್ರಿಯೆ ನಡೆಯಿತು. ಪ್ರಯಾಗರಾಜ್ ಕಾಲ್ತುಳಿದಲ್ಲಿ ಬೆಳಗಾವಿಯ ವಡಗಾವಿ ನಿವಾಸಿಗಳಾದ ತಾಯಿ ಜ್ಯೋತಿ ಹತ್ತರವಾಠ ಮತ್ತು ಮಗಳು ಮೇಘಾ ಅಸುನೀಗಿದ್ದರು.

ನಿನ್ನೆ ರಾತ್ರಿ ಗೋವಾ ತಲುಪಿದ್ದ ತಾಯಿ, ಮಗಳ ಮೃತದೇಹಗಳು ಮಧ್ಯರಾತ್ರಿ 1 ಗಂಟೆಗೆ ಬೆಳಗಾವಿ ತಲುಪಿದವು. ತಾಯಿ ಮತ್ತು ಮಗಳ ಶವವನ್ನ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ರಿಸೀವ್​  ಮಾಡಿಕೊಂಡು ಶ್ರದ್ಧಾಂಜಲಿ ಅರ್ಪಿಸಿದರು. ಆ ಬಳಿಕ ತಕ್ಷಣವೇ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬೆಳಗಾಗುತ್ತಿದ್ದಂತೆ ತಾಯಿ, ಮಗಳ ಶವವನ್ನ ಬೆಳಗಾವಿ ವಡಗಾವಿ ಮನೆಗೆ ತೆಗೆದುಕೊಂಡು ಬರಲಾಯಿತು. ಶವಗಳು ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರ ಕಣ್ಣೀರು ಮುಗಿಲು ಮುಟ್ಟಿತ್ತು. ಒಂದೇ ತಂಡದಲ್ಲಿ ಹೋಗಿದ್ದವರು ಹೆಣವಾಗಿದ್ದು ಕಂಡು ಎಲ್ಲರ ಕಣ್ಣಲ್ಲೂ ಕಣ್ಣೀರು ಚಿಮ್ಮಿದವು.

ಇದನ್ನೂ ಓದಿ :30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟ: ಮತ್ತೊಬ್ಬ ಜೂನಿಯರ್ ಪ್ರಜ್ವಲ್​ ರೇವಣ್ಣ ಪತ್ತೆ !

ಎರಡು ಗಂಟೆ ಕಾಲ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕೊಟ್ಟ ಕುಟುಂಬಸ್ಥರು. ಆ ಬಳಿಕ ಮನೆಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಾನ ಪೂರೈರಿಸಿದರು. ಇದೇ ಸಂದರ್ಭದಲ್ಲಿ ಸಾಕು ನಾಯಿಯನ್ನ ಕರೆದುಕೊಂಡು ಬಂದು ತಾಯಿ, ಮಗಳ ಮುಖವನ್ನ ಅಂತಿಮವಾಗಿ ತೋರಿಸುವ ದೃಶ್ಯಗಳು ದುರ್ವಿಧಿಗೆ ಹಿಡಿಶಾಪ ಹಾಕುವಂತೆ ಮಾಡಿತು. ಅನಂತರ ಬೆಳಗಾವಿ ಶಹಾಪುರದ ಸ್ಮಶಾನದಲ್ಲಿ ಹೆಂಡ್ತಿ, ಮಗಳಿಗೆ ಪ್ರತ್ಯೇಕ ಚಿತೆಯಲ್ಲಿ ಪೂಜೆ ಸಲ್ಲಿಸಿದ ದೀಪಕ ಹತ್ತರವಾಠ ಅಗ್ನಿಸ್ಪರ್ಶ ನೀಡಿದ್ರು.

ಒಟ್ಟಿನಲ್ಲಿ ಐತಿಹಾಸಿಕ ಪ್ರಯಾಗರಾಜ್ ಮಹಾಕುಂಭ ಮೇಳದ ಕಾಲ್ತುಳಿದ ಪ್ರಕರಣ ಕನ್ನಡಿಗರಿಗೆ ಕರಾಳ ದಿನವಾಗಿ ಉಳಿದಿದೆ. ಆ ನಾಲ್ವರು ಕುಟುಂಬಸ್ಥರು ಮನೆ ಸದಸ್ಯನನ್ನ ಕಳೆದುಕೊಂಡು ಅಕ್ಷರಶಃ ಅನಾಥವಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments