Sunday, August 24, 2025
Google search engine
HomeUncategorizedಹತ್ತಿರ ಬಂದೇ ಬಿಡ್ತು ಕಿಚ್ಚ -ದಚ್ಚು ಒಂದಾಗೋ ಕಾಲ : ವಿನೀಶ್​ ಕೊಟ್ಟ ಸಿಗ್ನಲ್​ ಏನು...

ಹತ್ತಿರ ಬಂದೇ ಬಿಡ್ತು ಕಿಚ್ಚ -ದಚ್ಚು ಒಂದಾಗೋ ಕಾಲ : ವಿನೀಶ್​ ಕೊಟ್ಟ ಸಿಗ್ನಲ್​ ಏನು ಗೊತ್ತಾ ?

ಸಿನಿಮಾ : ಸುದೀಪ್ ಹಾಗೂ ದರ್ಶನ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಕಾರಣಾಂತರಗಳಿಂದ ಇಬ್ಬರೂ ದೂರಾಗಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಅವರಿಬ್ಬರು ಮತ್ತೆ ಒಂದಾಗಬೇಕು ಎಂದು ಫ್ಯಾನ್ಸ್​ ಕಾದು ಕಾದು ಸುಮ್ಮನಾದರು. ಆದರೆ ಇದೀಗ ದರ್ಶನ್​ ಪುತ್ರ ವಿನೀಶ್​ ಸುದೀಪ್​ ಮತ್ತು ದರ್ಶನ್​ ಒಂದಾಗುವ ಸೂಚನೆ ನೀಡಿದ್ದಾರೆ.

ಕೆಲ ವರ್ಷಗಳ ಹಿಂದೆ ನಾನು ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ ಎಂದು ದರ್ಶನ್ ಟ್ವೀಟ್ ಮಾಡಿ ತಿಳಿಸಿದ್ದರು. ಸ್ನೇಹ ಕಡಿದುಕೊಂಡಿದ್ದನ್ನು ದರ್ಶನ್ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದು ಅಚ್ಚರಿ ತಂದಿತ್ತು. ಬಳಿಕ ಅದಕ್ಕೆ ಕಾರಣಕ್ಕೆ ಕೂಡ ಕೊಟ್ಟಿದ್ದರು. ಆದರೆ ನಿಜವಾದ ಕಾರಣ ಬೇರೆನೇ ಇದೆ, ಅದು ಏನು ಗೊತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಲೇ ಇದ್ದಾರೆ.

ದರ್ಶನ್ ಹಾಗೂ ಸುದೀಪ್ ಕುಟುಂಬಗಳ ನಡುವೆಯೂ ಕೂಡ ಒಳ್ಳೆ ಬಾಂಧವ್ಯ ಇತ್ತು. ಕೆಲ ವರ್ಷಗಳ ಹಿಂದೆ ದರ್ಶನ್ ಪುತ್ರ ವಿನೀಶ್‌ನನ್ನು ಸುದೀಪ್ ಹೆಗಲಮೇಲೆ ಕೂರಿಸಿಕೊಂಡು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೊ ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೆಲ್ಲದರ ನಡುವೆ ಸುದೀಪ್ ಅವರನ್ನು ವಿನೀಶ್ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರು. ಅನ್ನೋ ವಿಚಾರ ಚರ್ಚೆಯಾಗುತ್ತಿದೆ

ಇದನ್ನೂ ಓದಿ :KSRTC ಬಸ್​ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ : ಐವರಿಗೆ ಗಂಭೀರ ಗಾಯ !

ಸೋಶಿಯಲ್ ಮೀಡಿಯಾದ ಖಾತೆಗಳಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುವುದು ಗೊತ್ತೇಯಿದೆ. ಅದರಲ್ಲೂ ಸೆಲೆಬ್ರೆಟಿಗಳು ಯಾರನ್ನು ಫಾಲೋ ಮಾಡುತ್ತಾರೆ ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ದರ್ಶನ್ ನಾವಿಬ್ಬರು ಫ್ರೆಂಡ್ಸ್ ಅಲ್ಲ ಎಂದು ಹೇಳಿದ ಮೇಲೂ ಬಹಳ ದಿನಗಳ ಕಾಲ ಸುದೀಪ್ ಟ್ವಿಟ್ಟರ್‌ನಲ್ಲಿ ದರ್ಶನ್ ಅವರನ್ನು ಫಾಲೋ ಮಾಡಿದ್ದರು. ಈಗ ದರ್ಶನ್​ ಪುತ್ರ ವಿನೀಶ್​ ಸುದೀಪ್​ ಅವ್ರನ್ನ ಫಾಲೋ ಮಾಡೋ ಮೂಲಕ ಇಬ್ಬರು ಒಂದಾಗೋ ದೊಡ್ಡ ಸಿಗ್ನಲ್​ ಕೊಟ್ಟಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.

ಇನ್ನು ದರ್ಶನ್ ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಜನರನ್ನು ಫಾಲೋ ಮಾಡಲ್ಲ. ಆ ಲಿಸ್ಟ್‌ನಲ್ಲಿ ಸುದೀಪ್ ಕೂಡ ಇಲ್ಲ. ಆದರೆ ದರ್ಶನ್ ಪುತ್ರ ವಿನೀಶ್ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀಪ್ ಅವರನ್ನು ಫಾಲೋ ಮಾಡುತ್ತಿದ್ದರು ಎನ್ನಲಾಗ್ತಿದೆ. ಕಳೆದ ಎರಡು ದಿನಗಳಿಂದ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನೂ ಕೆಲ ದಿನಗಳ ಹಿಂದೆ ದರ್ಶನ್​ ಭವಿಷ್ಯ ನುಡಿದಿದ್ದ ಜ್ಯೋತಿಷಿಯೋಬ್ರು ಮತ್ತೆ ಸುದೀಪ್​ ದರ್ಶನ್​ ಒಂದಾಗುತ್ತಾರೆ , ಫೆಬ್ರುವರಿಯಲ್ಲಿ ಇವರಿಬ್ಬರ ಸ್ನೇಹ ಮತ್ತೆ ಚಿಗುರುತ್ತದೆ ಅಂತ ಹೇಳಿದ್ರು , ಫೆಬ್ರುವರಿ ಆರಂಭವಾಗೋಕೆ ಒಂದೇ ವಾರ ಇರೋವಾಗ್ಲೇ ಈ ತರಹದ ಸುದ್ದಿ ವೈರಲ್​ ಆಗಿದೆ,  ಮಗನ ಮೂಲಕವಾದ್ರು ಈ ಕುಚುಕು ಗೆಳೆಯರು ಮತ್ತೆ ಒಂದಾಗ್ಲಿ ಅನ್ನೋದೇ ಅಭಿಮಾನಿಗಳ ಬಯಕೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments