Friday, August 29, 2025
HomeUncategorizedಆನ್​ಲೈನ್​ ಗೇಮ್​ ಗೀಳು : ಡೆತ್​ನೋಟ್​ ಬರೆದು ಆತ್ಮಹ*ತ್ಯೆಗೆ ಶರಣಾದ ಯುವಕ !

ಆನ್​ಲೈನ್​ ಗೇಮ್​ ಗೀಳು : ಡೆತ್​ನೋಟ್​ ಬರೆದು ಆತ್ಮಹ*ತ್ಯೆಗೆ ಶರಣಾದ ಯುವಕ !

ಹಾಸನ: ಆನ್​ಲೈನ್​ ಗೇಮ್​ ಚಟಕ್ಕೆ ಬಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಆನ್​ಲೈನ್​ ಚಟಕ್ಕೆ ಸಾಲ ಮಾಡಿಕೊಂಡಿದ್ದ ಯುವಕ ಸಾಲ ತೀರಿಸಲಾಗದೆ ಆತ್ಮಹತ್ಯೆಯ ದಾರಿ ಹಿಡಿದ್ದಾನೆ.

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚೋಕನಹಳ್ಳಿ ಎಂಬ ಗ್ರಾಮದ  ಇಪ್ಪತ್ತೈದು ವರ್ಷದ ರಾಕೇಶ್ ಗೌಡ ಎಂಬ ಯುವಕ ಆನ್‌ಲೈನ್​ನಲ್ಲಿ ಆಟವಾಡಿ ಲಕ್ಷಾಂತರ ರೂ ಹಣ ಕಳೆದುಕೊಂಡಿದ್ದಾನೆ. ಇದನ್ನ ತೀರಿಸಲಾಗದೆ ಸ್ನೇಹಿತರ ಬಳಿಯೂ ಸಾಲ‌ಮಾಡಿ ತಾನು ಕೆಲಸ ಮಾಡುತ್ತಿದ್ದ ಫೈನಾನ್ಸ್ ಕಚೇರಿಯ ಒಂದು ಲಕ್ಷ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾನೆ. ಈ ಹಣವನ್ನ ವಾಪಾಸ್ ಕಟ್ಟುವಂತೆ ಫೈನಾನ್ಸ್ ಕಚೇರಿಯವರು ಪೀಡಿಸಿ ಕಾಟ ಕೊಡುತ್ತಿದ್ದರಂತೆ.

ಇದನ್ನೂ ಓದಿ: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೆ ಸಾ*ವು !

ಸಾಲ ತೀರಿಸಲಾಗದ ಪರಿಸ್ಥಿತಿಯಲ್ಲಿದ್ದ ರಾಕೇಶ್ ಈ ಘಟನೆಯಿಂದ ಮನನೊಂದು ಬೇಲೂರಿನ ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಬಾಡಿಗೆ ಪಡೆದು ಅದೇ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ದಿನ ಮಾತ್ರ ರೂಮ್ ಬಾಡಿಗೆ ಪಡೆದು ಎರಡು ದಿನವಾದರೂ ಆಚೆ ಬಾರದ ಹಿನ್ನಲೆ ಲಾಡ್ಜ್‌ನ ಸಿಬ್ಬಂದಿ ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಗೂ ಮುನ್ನ ಮನಕಲಕುವಂತೆ ತನಗಾದ ನೋವನ್ನ ಡೆತ್ ನೋಟ್ ಬರೆದಿಟ್ಟಿದ್ದು ಎರಡು ವರ್ಷದಿಂದ ಆನ್‌ಲೈನ್ ಗೇಮ್‌ ಆಡಿ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ, ಆ ಹಣವನ್ನು ತೀರಿಸಲು ನನ್ನಿಂದ ಆಗದೇ ಕೊನೆಯದಾಗಿ ಈ ನಿರ್ಧಾರ ಮಾಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ಅಮ್ಮ ನನ್ನನ್ನು ಕ್ಷಮಿಸಿಬಿಡು ಎಂದು ಬರೆದುಕೊಂಡಿದ್ದಾನೆ.

ಒಟ್ಟಾರೆ ರಾಜ್ಯದಲ್ಲಿ‌ ದಿನೇ‌ ದಿನೇ ಈ ಆನ್‌ಲೈನ್ ಭೂತಕ್ಕೆ ಬಲಿಯಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ದುಷ್ಟ ಚಟುವಟಿಕೆಗೆ ಆದಷ್ಟು ಬೇಗ ಕಡಿವಾಣ ಹಾಕಬೇಕಿದ್ದು ಇಲ್ಲದೇ ಇದ್ದರೆ ಇದು ಕೂಡ ವೈರಸ್ ನಂತೆ ಈ ಗೀಳು ಹರಡಿ ಮತ್ತಷ್ಟು ಯುವ ಶಕ್ತಿ ನಾಶವಾಗೋದರಲ್ಲಿ ಯಾವುದೇ ಸಂಶಯವಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments