Sunday, August 24, 2025
Google search engine
HomeUncategorizedಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಸಾ*ವು !

ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಸಾ*ವು !

ಛತ್ತೀಸಗಢದ ಸುಷ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ಇಂದು ನಡೆದ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಛತ್ತೀಸಗಡ ಉಪಮುಖ್ಯಮಂತ್ರಿ ವಿಜಯ್​ ಶರ್ಮ ‘ ನಕ್ಸಲ್​ ಕಾರ್ಯಚರಣೆಯಲ್ಲಿ ಭದ್ರತಾ ಪಡೆಗಳು ಯಶಸ್ಸು ಸಾಧಿಸಿವೆ ಎಂದು ಹೇಳಿ, ಅಭಿನಂಧಿಸಿದರು.

ಮುಂದುವರಿದು ಮಾತನಾಡಿರುವ ವಿಜಯ್​ ಶರ್ಮ ‘ಎನ್​ ಕೌಂಟರ್​ ನಡೆದಿರುವ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ರಾಯ್‌ಪುರದಲ್ಲಿ ತಿಳಿಸಿದ್ದಾರೆ ಹಾಗೂ ನಕ್ಸಲರ ಶರಣಾಗತಿಯಾಗುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ವಿಶ್ವದ ಭವಿಷ್ಯ ನಿಂತಿರುವುದು ಯುದ್ಧದಲ್ಲಿ ಅಲ್ಲ, ಬುದ್ಧನಲ್ಲಿ : ನರೇಂದ್ರ ಮೋದಿ

ಜನವರಿ 6ರಂದು ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರ ಐಇಡಿ ದಾಳಿಯಲ್ಲಿ ಎಂಟು ಪೊಲೀಸರು ಹಾಗೂ ಕಾರಿನ ಚಾಲಕ ಹುತಾತ್ಮರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ‘ಭದ್ರತಾ ಸಿಬ್ಬಂದಿಯನ್ನು ನಾನು ಭೇಟಿಯಾಗಿದ್ದೇನೆ. ನಮ್ಮ ಜವಾನರಿಗೆ ಧೈರ್ಯ ತುಂಬಿದ್ದೇನೆ. ನಕ್ಸಲರ ಈ ಕೃತ್ಯದ ವಿರುದ್ಧ ಯೋಧರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ನಿಗದಿತ ಅವಧಿಯೊಳಗೆ ನಕ್ಸಲರನ್ನು ನಿಗ್ರಹ ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುಕ್ಕಾ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್‌ಕೌಂಟರ್ ನಡೆದಿದೆ. ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ ಮತ್ತು ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಇದರೊಂದಿಗೆ ಈ ವರ್ಷ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಂಬತ್ತು ಮಂದಿ ನಕ್ಸಲರನ್ನು ನಿಗ್ರಹಿಸಲಾಗಿದೆ.

ಇದರೊಂದಿಗೆ ಈ ವರ್ಷ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಂಬತ್ತು ಮಂದಿ ನಕ್ಸಲರನ್ನು ನಿಗ್ರಹಿಸಲಾಗಿದೆ. ಜನವರಿ 6ರಂದು ನಾರಾಯಣಪುರ, ದಂತೇವಾಡ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ನಕ್ಸರನ್ನು ಹತ್ಯೆಗೈಯಲಾಗಿತ್ತು. ಜನವರಿ 3ರಂದು ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ನಕ್ಸಲ್ ಹತನಾಗಿದ್ದನು. ಕಳೆದ ವರ್ಷ (2024) ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ, 219 ನಕ್ಸಲರನ್ನು ಮಟ್ಟ ಹಾಕಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments