Sunday, August 24, 2025
Google search engine
HomeUncategorizedಮುಂಬೈ ದಾಳಿಯ ಪ್ರಮುಖ ಉಗ್ರ ಅಬ್ದುಲ್​ ರೆಹಮಾನ್​ ಮಕ್ಕಿ ಹೃದಯಘಾತದಿಂದ ಸಾ*ವು !

ಮುಂಬೈ ದಾಳಿಯ ಪ್ರಮುಖ ಉಗ್ರ ಅಬ್ದುಲ್​ ರೆಹಮಾನ್​ ಮಕ್ಕಿ ಹೃದಯಘಾತದಿಂದ ಸಾ*ವು !

ಇಸ್ಲಾಮಾಬಾದ್‌: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸೋದರ ಮಾವ ಮತ್ತು ನಿಷೇಧಿತ ಜಮಾತ್-ಉದ್-ದವಾ ಉಪ ಮುಖ್ಯಸ್ಥ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ಶುಕ್ರವಾರ ಲಾಹೋರ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ : ಸೀರಿಯಲ್​ ನಟ ಚರಿತ್​ ಬಾಳಪ್ಪ ಅರೆಸ್ಟ್​ !

ಕಳೆದ ಕೆಲವು ದಿನಗಳಿಂದ ಮಧುಮೇಹ, ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ ರಹಮಾನ್ ಮಕ್ಕಿ ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು (ಡಿ.27) ಮುಂಜಾನೆ ಮಕ್ಕಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದ ಈತನಿಗೆ 2020 ರಲ್ಲಿ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 2023 ರಲ್ಲಿ ಮಕ್ಕಿಯನ್ನು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ ಆತನ ಸ್ವತ್ತುಗಳ ಜಪ್ತಿ ಮಾಡಿ ಪ್ರಯಾಣ ನಿಷೇಧ ಹೇರಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments