Saturday, August 23, 2025
Google search engine
HomeUncategorizedರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ :ಮೋಹನ್ ಭಾಗವತ್

ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ :ಮೋಹನ್ ಭಾಗವತ್

ಪುಣೆ :  ಹಿಂದೂ ಸೇವಾ ಮಹಾವತ್ ಕಾರ್ಯಕ್ರಮದ ಸಂದರ್ಭದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥರು ಇತ್ತೀಚಿನ ಮಂದಿರ-ಮಸೀದಿ ವಿವಾದಗಳನ್ನೂ ಪ್ರಸ್ತಾಪಿಸಿದರು. ರಾಮ ಮಂದಿರ ನಿರ್ಮಾಣದ ನಂತರ ಕೆಲವರು ಹೊಸ ಜಾಗಗಳಲ್ಲಿ ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ನಾಯಕರಾಗಬಹುದು ಎಂದು ಭಾವಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ, ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವಂತೆ ಅತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹತ್ವದ ಹೇಳಿಕೆ ನೀಡಿದ್ದು ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ. ಈ ಹೊಸ ವಿವಾದಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಇದನ್ನೂಓದಿ :ಸಿ.ಟಿ ರವಿ ಓರ್ವ ಸುಸಂಸ್ಕೃತ ವ್ಯಕ್ತಿ : ಹೇಮಲತಾ ನಾಯಕ್, ಬಿಜೆಪಿ ಎಂಎಲ್​ಸಿ

ವಾಸ್ತವವಾಗಿ, ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಂತರ್ಗತ ಸಮಾಜವನ್ನು ಪ್ರತಿಪಾದಿಸಿದರು. ದೇಶ ಸೌಹಾರ್ದಯುತವಾಗಿ ಬದುಕಬಲ್ಲದು ಎಂಬುದನ್ನು ಜಗತ್ತಿಗೆ ಸಾರುವ ಅಗತ್ಯವಿದೆ ಎಂದರು. ರಾಮಕೃಷ್ಣ ಮಿಷನ್ ನಲ್ಲಿ ಕ್ರಿಸ್ ಮಸ್ ಆಚರಿಸಲಾಗುತ್ತದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥರು ಹೇಳಿದ್ದಾರೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನು ಮಾಡಲು ಸಾಧ್ಯ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments