Monday, August 25, 2025
Google search engine
HomeUncategorizedಸಿ.ಟಿ.ರವಿ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಿದ ಉಪ ಸಭಾಪತಿ ಎಂ.ಕೆ ಪ್ರಾಣೇಶ್​

ಸಿ.ಟಿ.ರವಿ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಿದ ಉಪ ಸಭಾಪತಿ ಎಂ.ಕೆ ಪ್ರಾಣೇಶ್​

ಚಿಕ್ಕಮಗಳೂರು : ಸಿ.ಟಿ.ರವಿ ಮೇಲಿನ ಹಲ್ಲೆ ಹಾಗೂ ಬಂಧನಕ್ಕೆ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಖಂಡನೆ ವ್ಯಕ್ತಪಡಿಸಿದ್ದು. ನಾನು ಹೋದಾಗ ಎಲ್ಲಾ ದಾಖಲೆಗಳನ್ನು ತಂದು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

ಸಿ.ಟಿ ರವಿ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಿದ ಪರಿಷತ್​ ಉಪಸಭಾಪತಿ ಎಂ.ಕೆ ಪ್ರಾಣೀಶ್​ ‘ನಾನು ಹೋದಾಗ ಘಟನೆಯನ್ನ ಕೂಲಂಕುಶವಾಗಿ ಪರಿಶೀಲಿಸುತ್ತೇನೆ, ಎಲ್ಲವನ್ನೂ ತರಿಸಿಕೊಂಡು ದಾಖಲೆ ಸಮೇತ ಪರೀಕ್ಷೆ ಮಾಡುತ್ತೇನೆ, 100 ವರ್ಷದ ಎಲ್ಲಾ ದಾಖಲೆಗಳು ಕೂಡ ಇರುತ್ತವೆ. ಆದರೆ ಇಲ್ಲಿ ದಾಖಲೆ ಇಲ್ಲ ಆದರೂ ಸಿ.ಟಿ ರವಿ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಉಪ ಸಭಾಪತಿ ಕಾಂಗ್ರೆಸ್ಸಿಗರೇ ನಡೆದಿರುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಿ,
ಇಲ್ಲಿಗೆ ಮುಗಿಸೋಣ ಎಂದು ಸಭಾಪತಿ ಹೇಳಿದ್ದಾರೆ, ಆದರೆ ಇದನ್ನ ರಾಜಕೀಯಕ್ಕೆ ತಿರುಗಿಸಿದ್ದು ಸಿಎಂ ಸಿದ್ದರಾಮಯ್ಯ. ಪರಿಷತ್‌ ಒಳಗೆ ಮಧ್ಯ ಪ್ರವೇಶಿಸಲು ಸಿಎಂಗೂ ಅವಕಾಶ ಇಲ್ಲ, ಆದರೆ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ.

ಸಿ,ಟಿ ರವಿಯನ್ನು ನಡೆಸಿಕೊಂಡ ರೀತಿ ನಿಜಕ್ಕೂ ಒಳ್ಳೆಯದಲ್ಲ. ಕಾಂಗ್ರೆಸ್ಸಿಗರ ಹಗರಣಗಳು ಟೈಟ್ ಆಗುತ್ತಿವೆ, ಅದಕ್ಕೆ ಘಟನೆಯನ್ನ ತಿರುಗಿಸಲು ಯತ್ನಿಸುತ್ತಿದ್ದಾರೆ. ಸಿ.ಟಿ. ರವಿ ಮೆಚ್ಯುರಿಟಿ ರಾಜಕಾರಣಿ, ಅವರ ಬಾಯಲ್ಲಿ ಅಂತಹಾ ಮಾತು ಬರೋಲ್ಲ, ರವಿಯನ್ನ ಟಾರ್ಚರ್ ಮಾಡಬೇಕು ಎಂಬುದೇ ಕಾಂಗ್ರೆಸ್​ನವರ ಉದ್ದೇಶವಾಗಿತ್ತು.

ನಾನು ಸಭಾಪತಿಗಳ ಜೊತೆ ಮಾತನಾಡಿದ್ದೇನೆ, ಸಭಾಪತಿ ಗಮನಕ್ಕೆ ತಂದು ಸದಸ್ಯನ ಬಂಧನವಾಗಬೇಕು, ನಾನು ನಿಮ್ಮ ಮೇಲೆ ಹಕ್ಕು ಚ್ಯುತಿಗೆ ಬರೆಯುತ್ತೇನೆ ಎಂದು ಡಿಸಿ, ಪೊಲೀಸರಿಗೆ ಸಭಾಪತಿ ಹೇಳಿದ್ದಾರೆ. ಹಾಗಾಗಿ ಪೊಲೀಸರು ಸಿ,ಟಿ ರವಿಯನ್ನಿ ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ಬಾಲನ್ನು ಗೋಡಗೆ ಹೊಡೆದರೆ ಅಲ್ಲೇ ಇರೋಲ್ಲ, ವಾಪಸ್ ಬರುತ್ತೆ. ಅದೇ ರೀತಿ ರಾಜಕಾರಣ ಕೂಡ ಹೀಗೆ ಇರೊಲ್ಲ ನಾಳೆ ನೀವು ಕೂಡ ಇದರ ಫಲಾನುಭವಿಗಳಾಗುತ್ತೀರ ಎಂದು ಸಿಎಂ ಮತ್ತು ಡಿಸಿಎಂ ಹಾಗೂ ಹೆಬ್ಬಳ್ಕರ್​ಗೆ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments