Monday, August 25, 2025
Google search engine
HomeUncategorizedಸದನದ ಸಮಯ ಹಾಳು ಮಾಡೋದು ಬೇಡ ಎಂದು ಹೇಳಿದ್ದೇನೆ : ಯತ್ನಾಳ್​

ಸದನದ ಸಮಯ ಹಾಳು ಮಾಡೋದು ಬೇಡ ಎಂದು ಹೇಳಿದ್ದೇನೆ : ಯತ್ನಾಳ್​

ಬೆಳಗಾವಿ : ಚಳಿಗಾಲದ ಅಧಿವೇಶದ ಕುರಿತು ಮಾತನಾಡಿದ ಯತ್ನಾಳ್​, ಸದನದ ಸಮಯ ಹಾಳು ಮಾಡೋದು ಬೇಡ ಎಂದು ಅಶೋಕ್​ಗೆ ಹೇಳಿದ್ದೇನೆ. ಸದನದ ಬಾವಿಯಲ್ಲಿ ಕುಳಿತು ಊಟ, ಭಜನೆ ಮಾಡೋದರಿಂದ ಏನು ಪ್ರಯೋಜನ ಇಲ್ಲ ಎಂದು ಹೇಳಿದರು.

ಚಳಿಗಾಲದ ಅಧಿವೇಶನಕ್ಕೆ ಕ್ಷಣ ಗಣನೆ ಆರಂಭವಾಗಿದ್ದು. ಬೆಳಗಾವಿಯ ಸುವರ್ಣ ಸೌದದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನೊಂದೆಡೆ ವಿರೋಧ ಪಕ್ಷಗಳೂ ಕೂಡ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಯೋಜನೆ ಹಾಕಿಕೊಂಡಿದ್ದು. ಇದರ ನಡುವೆ ಬಿಜೆಪಿ ರೆಬಲ್​ ನಾಯಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾದ್ಯಮದ ಜೊತೆ ಮಾತನಾಡಿದ್ದು. ಅಧಿವೇಶನದಲ್ಲಿ ಊಟ, ಭಜನೆ ಮಾಡಿ ಸದನದ ಸಮಯವನ್ನು ಹಾಳು ಮಾಡದೆ ಬೇರೆ ರೀತಿಯಾಗಿನ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಬೆಳಗಾವಿ ಅಧಿವೇಶನ ಎದುರಿಸಲು ಯಡಿಯೂರಪ್ಪರ ಸಲಹೆ ಪಡೆಯುತ್ತಿರಾ ಎಂಬ ಪ್ರಶ್ನೆ ಉತ್ತರಿಸಿದ ಯತ್ನಾಳ್​ ‘ಬಿಎಸ್​ವೈ ಅವರ ಸಲಹೆ ತಗೊಳ್ಳೋ ಅವಶ್ಯಕತೆ ನಮಗೆ ಇಲ್ಲ.ನಾನು ಬಿಎಸ್‌ವೈ ರೀತಿ ಲೀಡರ್​ ಇದ್ದೀನಿ. ದೇವರು ನಮಗೂ ಮೈಂಡ್​ ಕೊಟ್ಟಿದ್ದಾನೆ. ಯಾರೋ ದೆಹಲಿಯಲ್ಲಿ ಹೇಳ್ತಾರೆ ಅಂತ ಯತ್ನಾಳ್​ ಇಲ್ಲಿ ಹೋರಾಟ ಮಾಡುತ್ತಿಲ್ಲ. ನಾವು ನಮ್ಮ ಸ್ವಂತ ಬುದ್ದಿಯ ಮೇಲೆ ಇಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಅಧೀವೇಶನದ ಸಮಯದಲ್ಲಿ ಸದನದ ಸಮಯ ಹಾಳು ಮಾಡೋದು ಬೇಡ ಅಂತಾ ಅಶೋಕ ಅವರಿಗೆ ಹೇಳಿದ್ದೇನೆ. ನಾವು  ಸದನದ ಬಾವಿಯಲ್ಲಿ ಕೂತು ಪ್ರತಿಭಟನೆ ಮಾಡೋದು ಬೇಡ, ಅಲ್ಲಿ ಕೂತು ಊಟ, ಭಜನೆ ಮಾಡೋದರಿಂದ ಏನೂ ಆಗುವುದಿಲ್ಲ. ಅವರದ್ದು ಮೆಜಾರಿಟಿ ಇದೆ, ನಾವು ಸಮಸ್ಯೆ ಬಗ್ಗೆ ಬೆಳಕು ಚೆಲ್ಲೋಣ ಎಂದು ಹೇಳಿದ್ದೇವೆ.

ಮುಂದುವರೆದು ಮಾತನಾಡಿದ ಯತ್ನಾಳ್​ ‘ ನಾವು ಸ್ಪೀಕರ್​ರ ಜೊತೆಗೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಚರ್ಚೆಗೆ ಅವಕಾಶ ಕೊಡದೆ ಇದ್ದರೆ  ಆಗ ಪ್ರತಿಭಟನೆ ಮಾಡುತ್ತೇವೆ. ಕೆಲಸಕ್ಕೆ ಭಾರದ ವಿಷಯಗಳನ್ನು ಸದನದಲ್ಲಿ ಚರ್ಚೆ ಮಾಡದೆ ಉತ್ತರ ಕರ್ನಾಟಕ ಭಾಗದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments