Thursday, August 28, 2025
HomeUncategorizedಪ್ರೀತಿ ಹೆಸರಲ್ಲಿ ಕೋಟಿ ಕೋಟಿ ಹಣ ಕಿತ್ತು ಜೈಲು ಪಾಲಾದ ರಸಿಕ ..!

ಪ್ರೀತಿ ಹೆಸರಲ್ಲಿ ಕೋಟಿ ಕೋಟಿ ಹಣ ಕಿತ್ತು ಜೈಲು ಪಾಲಾದ ರಸಿಕ ..!

ಬೆಂಗಳೂರು: ಅವರಿಬ್ಬರು ಒಂದೇ ಸ್ಕೂಲ್‌ನಲ್ಲಿ ಓದುತ್ತಿದ್ರು. ಇಬ್ಬರ ನಡುವೆ ಸಲುಗೆ ಬೆಳೆದು ಸುತ್ತಡೋಕೆ ಶುರು ಮಾಡಿದ್ರು. ಆದರೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆ ಸೀನಿಯರ್ ಹುಡುಗ, ಬ್ಲ್ಯಾಕ್ ಮೇಲ್ ಶುರು ಮಾಡಿದ. ಕೊನಗೆ ಬ್ಲ್ಯಾಕ್‌ ಮೇಲ್ ಮೂಲಕ ಕೋಟಿ‌ ಕೋಟಿ ಹಣ ಕಿತ್ತು ಕೊನೆಗೆ ಜೈಲು ಪಾಲಾಗಿದ್ದಾನೆ.

ಹೌದು ಸ್ಕೂಲು, ಕಾಲೇಜು ಅಂದ್ರೆ ಅದೊಂದು‌ ಕಲರ್ ಫುಲ್ ಲೈಫ್. ಓದು, ಆಟ, ಎಂಟರ್ಟೈನ್ಮೆಂಟ್ ಅಂತ ಭವಿಷ್ಯದ ಬಗ್ಗೆ ಕನಸು ಕಟ್ಕೊಳೋ ದಿನಗಳು. ಇಂತ ಕಲರ್ ಫುಲ್ ಲೈಫ್ ನಲ್ಲಿ ಇರೋವಾಗ ಸ್ವಲ್ಪ ಯಾಮಾರಿದ್ರೂ ಭವಿಷ್ಯವೇ ಹಾಳಾಗೋ ಚಾನ್ಸ್ ಇರುತ್ತೆ. ಇಂತದ್ದೆ ಒಂದು‌ ಕಥೆ ಬೆಂಗಳೂರಿನ ಯುವತಿಯೊಬ್ಬಳ‌ ಜೀವನದಲ್ಲಿ ನಡೆದಿದೆ.

ನಾಲ್ಕು ವರ್ಷದ ಹಿಂದೆ ಮೋಹನ್ ಮತ್ತು ಸಂತ್ರಸ್ಥ ಯುವತಿ ಬೆಂಗಳೂರಿನ ಒಂದೇ ಬೋರ್ಡಿಂಗ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡ್ತಿರ್ತಾರೆ. ಹೈಸ್ಕೂಲ್ ನಲ್ಲಿ ಇರೋವಾಗ್ಲೆ ಸೀನಿಯರ್ ಮೋಹನ್ ಮತ್ತು ಯವತಿಗೆ ಪರಸ್ಪರ ಪರಿಚಯ ಆಗಿ ಸ್ನೇಹ ಶುರುವಾಗುತ್ತೆ. ಬಳಿಕ ಇಬ್ಬರೂ ಸ್ನೇಹಿತರ ಜೊತೆ ಸುತ್ತಾಡೋಕೆ ಶುರು ಮಾಡ್ತಾರೆ. ಈ ಸುತ್ತಾಟದ ವೇಳೆ ಮದುವೆಯ ಮಾತುಗಳ್ಳನಾಡಿ ಯುವತಿಯ ಮೇಲೆ ಮೋಹನ್ ಲೈಂಗಿಕ ದೌರ್ಜನ್ಯ ಎಸಗಿರ್ತಾನೆ. ಆದರೆ ಈ ಖಾಸಗಿ ಕ್ಷಣಗಳ ವಿಡಿಯೋ ಇಟ್ಕೊಂಡು ಮೋಹನ್ ಯುವತಿಗೆ ಬ್ಲ್ಯಾಕ್ ಮೇಲ್ ಶುರು ಮಾಡ್ತಾನೆ. ಇದ್ರಿಂದ‌ ಹೆದರಿದ ಯುವತಿ ವಾಚ್, ಚಿನ್ನಾಭರಣ, ಬೈಕ್ ಜೊತೆ ತನ್ನ‌ ಕುಟುಂಬಸ್ಥರ ಅಕೌಂಟ್ ನಿಂದ ಹಾಗೂ ಕ್ಯಾಶ್ ರೂಪದಲ್ಲಿ 2.57 ಕೋಟಿ ರೂ. ನೀಡ್ತಾಳೆ. ಇಷ್ಟಾದ್ರೂ ಮೋಹನ್ ದಾಹ ತೀರದೇ ಇದ್ದಾಗ ಯುವತಿ ಸಿಸಿಬಿ ಪೊಲೀಸರ ಮೊರೆ ಹೋಗ್ತಾಳೆ.

ಸಂತ್ರಸ್ಥ ಯುವತಿ ಕೇವಲ ಮೋಹನ್ ವಿರುದ್ಧ ಮಾತ್ರವಲ್ಲ ಆಕೆಯ ಕುಟುಂಬಸ್ಥರು, ಸ್ನೇಹಿತರೂ ಕೂಡ ಈ ಬ್ಲ್ಯಾಕ್ ಮೇಲ್‌ನಲ್ಲಿ ಭಾಗಿ ಅಂತ ದೂರು ನೀಡಿದ್ಲು. ಸದ್ಯ ಪೋಕ್ಸೋ, ಐಟಿ ಮತ್ತು ಐಪಿಸಿ ಕಾಯ್ದೆಯಡಿ ಪ್ರಕಣದ ದಾಖಲಸಿಕೊಂಡು ತನಿಖೆ‌ ನಡೆಸಿರೋ ಸಿಸಿಬಿ ಪೊಲೀಸರು ಆರೋಪಿ‌ ಮೋಹನ್ ಬಂಧಿಸಿ ಜೈಲಿಗೆ ಅಟ್ಟಿದ್ದು, ತನಿಖೆ‌ ಮುಂದುವರಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments