Sunday, September 14, 2025
HomeUncategorizedಮಂತ್ರಾಲಯ ಮಠಕ್ಕೆ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಕಾಣಿಕೆ ಹಣ

ಮಂತ್ರಾಲಯ ಮಠಕ್ಕೆ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಕಾಣಿಕೆ ಹಣ

ರಾಯಚೂರು: ಮಂತ್ರಾಲಯದ ಗುರು ರಾಘವೇಂದ್ರ ಮಠಕ್ಕೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹರಿದು ಬಂದಿದ್ದು. ಕೇವಲ 31 ದಿನಗಳಲ್ಲಿ ಸುಮಾರು 3.92 ಕೋಟಿಯಷ್ಟು ಹಣ ಸಂಗ್ರಹವಾಗಿದೆ ಎಂದು ಮಾಹಿತಿ ದೊರೆತಿದೆ.

ರಾಯಚೂರಿನ ಮಂತ್ರಾಲಯ ಮಠಕ್ಕೆ ದೇಶದ ಮೂಲೆ ಮೂಲೆಯಿಂದಲು ಭಕ್ತಾಧಿಗಳು ಆಗಮಿಸಿ ಗುರು ರಾಯರ ಕೃಪೆಗೆ ಪಾತ್ರರಾಗುತ್ತಾರೆ. ಬರುವ ಭಕ್ತರು ಯಥೇಚ್ಚವಾಗಿ ದೇವಾಲಯದ ಹುಂಡಿಗೆ ಕಾಣಿಕೆಯನ್ನು ಅರ್ಪಿಸುತ್ತಾರೆ. ಆದರೆ ಈ ಬಾರಿ ದೇವಾಲಯಕ್ಕೆ ಭಾರೀ ಕಾಣಿಕೆ ಹರಿದು ಬಂದಿದೆ.

ಗುರುವಾರ (ನ.28)ರಂದು ರಾಯರ ಮಠದ ಹುಂಡಿ ಎಣಿಕೆ ಮಾಡಿದ್ದು. ಕೇವಲ 31 ದಿನಗಳಲ್ಲಿ ಸುಮಾರು 3,92,58,940₹ ರೂಪಾಯಿ ಹಣ ಸಂಗ್ರಹವಾಗಿದೆ. ಹಣದ ಜೊತೆಗೆ ಸುಮಾರು 174 ಗ್ರಾಂ ಚಿನ್ನ ಮತ್ತು ಸುಮಾರು 1270 ಗ್ರಾಂನಷ್ಟು ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ನೂರಾರು ಮಠದ ಸಿಬ್ಬಂದಿಗಳು ಹಾಗೂ ಭಜನಾ ಮಂಡಳಿಯ ಸದಸ್ಯರು ಈ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ದೊರೆತಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments