Saturday, September 13, 2025
HomeUncategorizedಆ್ಯಂಬುಲೆನ್ಸ್​​ನಲ್ಲೆ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್​ ರೇಪ್​​

ಆ್ಯಂಬುಲೆನ್ಸ್​​ನಲ್ಲೆ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್​ ರೇಪ್​​

ಭೂಪಾಲ್: ಆ್ಯಬುಲನ್ಸ್​​ನಲ್ಲಿ ಆಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಧಾರುಣ ಘಟನೆ ಮಧ್ಯಪ್ರವೇಶದ ಮೌ ಗಂಜ್​​ ಎಂಬಲ್ಲಿ ನಡೆದಿದ್ದು. ಕೃತ್ಯವೆಸಗಿದ 4 ಆರೋಪಿಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

ಒಟ್ಟು ನಾಲ್ವರು ಆರೋಪಿಗಳಿದ್ದು, ಆ ಪೈಕಿ ಇಬ್ಬರು ಆರೋಗಳಾದ ಮೌಗಂಜ್ ಜಿಲ್ಲೆಯ ನೈಗರ್ಹಿ ತಹಸಿಲ್‌ನ ನಿವಾಸಿಗಳಾದ ಅಂಬ್ಯುಲೆನ್ಸ್ ಚಾಲಕ ವಿರೇಂದ್ರ ಚತುರ್ವೇದಿ ಹಾಗೂ ಆತನ ಸ್ನೇಹಿತ ರಾಜೇಶ ಕೇವತ್‌ನನ್ನು ಬಂಧಿಸಿದ್ದಾರೆ

ಮೌಗಂಜ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಪ್ರದೇಶ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು, ಮಕ್ಕಳು ಹಾಗೂ ಬಿಪಿಎಲ್ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಜನನಿ ಎಕ್ಸ್ಪ್ರೆಸ್ ಅಂಬುಲೆನ್ಸ್ ಸೌಲಭ್ಯ ಒದಗಿಸಿತ್ತು. ಇದೀಗ ಈ ಆಂಬ್ಯುಲೆನ್ಸ್​ನಲ್ಲೆ ಅತ್ಯಾಚಾರ ನಡೆದಿದೆ.

ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್ ಸಾಕೇತ್ ಪಾಂಡೆ ಮಾಹಿತಿ ಪ್ರಕಾರ, ಅಪ್ರಾಪ್ತೆಯು ತನ್ನ ಸಹೋದರಿ ಹಾಗೂ ಮಾವನೊಂದಿಗೆ ಅಂಬುಲೆನ್ಸ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕ ಹಾಗೂ ಆತನ ಮೂವರು ಸಹಚರರು ಸಹ ಅಂಬುಲೆನ್ಸ್‌ನಲ್ಲಿದ್ದರು. ಮಾರ್ಗಮಧ್ಯೆ ನೀರು ತರಲೆಂದು ಬಾಲಕಿಯ ಸಹೋದರಿ ಹಾಗೂ ಆಕೆಯ ಮಾವ ಕೆಳಗಿಳಿದಿದ್ದಾರೆ. ಅವರಿಗಾಗಿ ಕಾಯದೇ ಅಂಬುಲೆನ್ಸ್‌ನ್ನೂ ಚಲಾಯಿಸಿಕೊಂಡು ಬಂದಿದ್ದು, ಚಾಲಕನ ಸ್ನೇಹಿತ ರಾಕೇಶ್ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಡೀ ರಾತ್ರಿ ಆ ಹುಡುಗಿಯನ್ನು ಆ್ಯಂಬುಲೆನ್ಸ್​ನಲ್ಲೆ ಇರಿಸಿಕೊಂಡು ಮಾರನೆ ದಿನ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ.

ಬಳಿಕ ಅಪ್ರಾಪ್ತೆ ಮನೆ ತಲುಪಿದ್ದು, ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ಇದ್ದರಿಂದ ಗಾಬರಿಯಾದ ತಾಯಿ ಮನೆಯ ಮರ್ಯಾದೆ ಪ್ರಶ್ನೆ ಎಂದು ದೂರು ದಾಖಲಿಸಿರಲಿಲ್ಲ. ಆದರೆ ಬಳಿಕ ನ.25 ರಂದು ಸಂತ್ರಸ್ತೆ ಹಾಗೂ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ನ.27 ರಂದು ನಾಲ್ವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಈ ಕೃತ್ಯದಲ್ಲಿ ಸಂತ್ರಸ್ತೆಯ ಸಹೋದರಿ ಹಾಗೂ ಮಾವ ಭಾಗಿಯಾಗಿರುವುದಾಗಿ ತಿಳಿಸಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ಎಸಗಿರುವುದಾಗಿ ದೃಢಪಟ್ಟಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments