Sunday, September 14, 2025
HomeUncategorized3 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು; ಬಸನಗೌಡ ಪಾಟೀಲ್​ ಯತ್ನಾಳ್ ಕಾರಣ : ಎಂ.ಪಿ ರೇಣುಕಾಚಾರ್ಯ​

3 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು; ಬಸನಗೌಡ ಪಾಟೀಲ್​ ಯತ್ನಾಳ್ ಕಾರಣ : ಎಂ.ಪಿ ರೇಣುಕಾಚಾರ್ಯ​

ಬೆಂಗಳೂರು : ಮಾಜಿ ಶಾಸಕರುಗಳು ಕುರುಡು ಮಲೆ ಗಣೇಶ ದೇವಸ್ಥಾನಕ್ಕೆ ಹೋಗ್ತಿದ್ದೇವೆ ಬಳಿಕ ಮೈಸೂರಿನ ಚಾಮುಂಡೇಶ್ವರಿ ಸನ್ನಿದಾನಕ್ಕೆ ಹೋಗ್ತಿದ್ದೇವೆ ಎಂದು ಎಂ.ಪಿ ರೇಣುಕಾಚಾರ್ಯ ಅವರು ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ನಾಡಿನ ಜನತೆಗೆ ಒಳೆಯತಾಗಬೇಕು, ಜನ ಚೆನ್ನಾಗಿರಬೇಕು. ಬಿಜೆಪಿಗೆ ಒಳ್ಳೆಯದು ಆಗಬೇಕು ಎಂದರು.

ಸದ್ಯ ಬಿಜೆಪಿಗೆ ನಾವೆಲ್ಲರೂ ಒಟ್ಟಾಗಿ ಆತ್ಮಸ್ಥೈರ್ಯ ತುಂಬುತ್ತೇವೆ. ಮೂರು ಉಪಚುನಾವಣೆಗಳಲ್ಲಿ ಪಕ್ಷಕ್ಕೆ ಸೋಲಾಗಿದ್ದು, ಕಾರ್ಯಕರ್ತರು ಮತ್ತು ಮುಖಂಡರಿಂದ ನೋವಾಗಿದೆ. ಅನಗತ್ಯವಾಗಿ ಕೆಲವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಹೇಳಿದರು.

ಇನ್ನು ಯಾರು ಮಧ್ಯದಲ್ಲಿ ನಿನ್ನೆ ಮೊನ್ನೆ ಬಂದು ಮಾತಾಡ್ತಿದ್ದಾರೆ. ಸ್ವಯಂ ಘೋಷಿತ ಹಿಂದೂ ನಾಯಕ ಎನಿಸಿಕೊಂಡವರು ಗೋಮುಖ ವ್ಯಾಘ್ರ! ಸದಾನಂದಗೌಡ ವಿರುದ್ದವೂ ಮಾತಾಡಿದ್ದಾರೆ. ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ. ಹಾಲಿ ಶಾಸಕರುಗಳು, ಪರಿಷತ್ ಸದಸ್ಯರು, ಸಂಸದರನ್ನು ಯಾರು ಕರೆದಿಲ್ಲ. ಇವಾಗ ನಾವೆಲ್ಲರೂ ಮಾಜಿ ಶಾಸಕರು ಹೋರಾಟ ಶುರು ಮಾಡ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಯತ್ನಾಳ್ ವಿರುದ್ಧ ಆಕ್ರೋಶ

ಅಲ್ಲದೇ, ಸಂಘಟನೆ ಸಾಮರ್ಥ್ಯವನ್ನು ರಾಜ್ಯದ ಅಧ್ಯಕ್ಷರು ಈಗಾಗಲೇ ತೋರಿಸಿದ್ದಾರೆ. ನಿಮ್ಮ ಹರುಕು ಬಾಯಿ, ಹೊಲಸು ಬಾಯಿಯಿಂದಲೇ ಕಳೆದ ಚುನಾವಣೆಯಲ್ಲಿ ಸೋಲಾಗಿದೆ. ಬಿಜೆಪಿಯ ಸೋಲಿಗೆ ನೀವೇ ಕಾರಣ.ನರೇಂದ್ರ ಮೋದಿಗಿಂತ ನೀನು ದೊಡ್ಡ ಮನುಷ್ಯ ಆಗಬಿಟ್ಯಾ? ವಕ್ಪ್ ಹೋರಾಟಕ್ಕೆ ಶೋಭಾ, ಪ್ರಹ್ಲಾದ್ ಜೋಷಿ ಬೆಂಬಲ ಕೊಟ್ಟಿದ್ದಾರೆ ವಿನಃ ನಿಮಗಲ್ಲ. ಪರ್ಯಾಯ ನಾಯಕತ್ವ ಸೃಷ್ಟಿಗೆ ಬೆಂಬಲ ಕೊಟ್ಟರಾ? ಪಕ್ಷ ಚಿಹ್ನೆ ನಿಮಗೆ ಕೊಟ್ಟವರು ಯಾರು? ವಿನಾಕಾರಣ ಸಂಘರ್ಷಕ್ಕೆ ಇಳಿದಿದ್ದಾರೆ. ನಿನಗೆ ತಾಕತ್ ಇದ್ದರೆ ಯಾರು ಆ ರಾಷ್ಟ್ರೀಯ ನಾಯಕ ನಿನಗೆ ಅನುಮತಿ ಕೊಟ್ಟರು ಹೇಳು? ನಿಮ್ಮ ನಡವಳಿಕೆ ಸರಿಯಾಗಿಲ್ಲ ಅಂದರೆ ವರಿಷ್ಠರ ಭೇಟಿ ಮಾಡಿ ನಿಮ್ಮ ಉಚ್ಚಾಟನೆಗೆ ಒತ್ತಾಯ ಮಾಡಬೇಕಾಗುತ್ತದೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಅವರು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments