Saturday, September 6, 2025
HomeUncategorizedದಲಿತರ ಬಗ್ಗೆ ಭಾಷಣ ಮಾಡುತ್ತಿದ್ದ ವೇಳೆ ರಾಹುಲ್​ ಗಾಂಧಿ ಮೈಕ್ ಆಫ್​​ !​

ದಲಿತರ ಬಗ್ಗೆ ಭಾಷಣ ಮಾಡುತ್ತಿದ್ದ ವೇಳೆ ರಾಹುಲ್​ ಗಾಂಧಿ ಮೈಕ್ ಆಫ್​​ !​

ದೆಹಲಿ : ಹೊಸದಿಲ್ಲಿಯ ತಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿಯವರ ಭಾಷಣದ ನಡುರೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ಲೈಟ್‌ಗಳು ಹಾಗೂ ಮೈಕ್‌ ಆಫ್‌ ಆಯಿತು. ಇದರಿಂದ ಕೆಲವು ಕಾಲ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು.

ಐದಾರು ನಿಮಿಷಗಳ ನಂತರ ಮೈಕ್‌ ಆನ್‌ ಆಗುತ್ತಿದ್ದಂತೆ ”ನನ್ನನ್ನು ಯಾರೂ ಕೂರಿಸೋಕೆ ಆಗೊಲ್ಲ, ಎಷ್ಟೇ ಮೈಕ್‌ ಆಫ್‌ ಮಾಡಿದರೂ ನಾನು ಹೇಳಬೇಕಿರುದನ್ನು ಹೇಳಿಯೇ ತೀರುತ್ತೇನೆ” ಎಂದು ರಾಹುಲ್‌ ಗಾಂಧಿ ಅಬ್ಬರಿಸಿದರು.ರಾಹುಲ್‌ ಗಾಂಧಿ ಅವರು ಸಂವಿಧಾನದಲ್ಲಿ ಕೊಟ್ಟಿರುವ ಸಮಾನ ಹಕ್ಕು, ದಲಿತರು ಹಾಗೂ ಜಾತಿ ಗಣತಿಯ ವಿಚಾರವಾಗಿ ಮಾತನಾಡಿದರು.

ನರೇಂದ್ರ ಮೋದಿಯವರು ಈ ಪುಸ್ತಕವನ್ನು ಓದಿದ್ದರೆ, ಈಗ ಪ್ರತಿನಿತ್ಯವೂ ಏನೆಲ್ಲಾ ಮಾಡುತ್ತಿದ್ದಾರೆಯೋ ಹಾಗೆ ಮಾಡುತ್ತಿರಲಿಲ್ಲ ಎಂದರು. ಅಂಬೇಡ್ಕರ್‌, ಫುಲೆ, ವಿವೇಕಾನಂದ ಹಾಗೂ ಬುದ್ಧನ ಯೋಚನೆಗಳನ್ನು ನೀವು ಸಂವಿಧಾನದಲ್ಲಿ ಕಾಣಬಹುದು. ಹಿಂಸಾಚಾರ ಮಾಡುವಂತೆ, ಬೇರೆಯವರನ್ನು ಹೆದರಿಸುವಂತೆ ಇದರಲ್ಲಿ ಹೇಳಿದೆಯೇ? ತೆಲಂಗಾಣದಲ್ಲಿ ಜಾತಿ ಗಣತಿಯನ್ನು ಶುರು ಮಾಡಲಾಗಿದೆ. ಅದರಲ್ಲಿ ದಲಿತರು, ಹಿಂದುಳಿದ ವರ್ಗಗಳ ಜನರು ಭಾಗಿಯಾಗಿದ್ದಾರೆ ಎಂದರು.

ದೇಶದಲ್ಲಿರುವ ದೊಡ್ಡ ಶ್ರೀಮಂತರು, ಕಂಪನಿಗಳಲ್ಲಿ ದಲಿತರು ಹಾಗೂ ಹಿಂದುಳಿದವರು ನಾಯಕ ಸ್ಥಾನದಲ್ಲಿ ಇದ್ದಾರೆಯೇ? ಅದಾನಿ, ಅಂಬಾನಿಯವರು ಹಿಂದುಳಿದವರೇ? ಅವರು ದಲಿತರೇ? ಐವತ್ತು ಶ್ರೀಮಂತರ ಪೈಕಿ ಒಬ್ಬ ದಲಿತ ಅಥವಾ ಆದಿವಾಸಿಯನ್ನು ತೋರಿಸಿ ಎಂದು ರಾಹುಲ್‌ ಗಾಂಧಿ ಸವಾಲು ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments