Sunday, August 24, 2025
Google search engine
HomeUncategorizedವಿಪಕ್ಷಗಳ ಗದ್ದಲ : ನ.27ಕ್ಕೆ ಸಂಸತ್​ ಕಲಾಪ ಮುಂದೂಡಿಕೆ

ವಿಪಕ್ಷಗಳ ಗದ್ದಲ : ನ.27ಕ್ಕೆ ಸಂಸತ್​ ಕಲಾಪ ಮುಂದೂಡಿಕೆ

ದೆಹಲಿ : ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ಸೋಮವಾರ ಯಾವುದೇ ಮಹತ್ವದ ಕಲಾಪ ನಡೆಯದೆ ಲೋಕಸಭೆ ಅಧಿವೇಶನವನ್ನು ಬುಧವಾರದವರೆಗೆ ಮುಂದೂಡಲಾಯಿತು. ವಿರಾಮದ ಬಳಿಕ 12 ಗಂಟೆಗೆ ಸದನ ಸೇರಿದ ಬಳಿಕ ಪ್ರತಿಪಕ್ಷದ ಸದಸ್ಯರು ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದ ಹಿಂಸಾಚಾರ ಖಂಡಿಸಿ ಘೋಷಣೆಗಳನ್ನು ಕೂಗಿದರು. ಜತೆಗೆ ಅಮೆರಿಕ ನ್ಯಾಯಾಲಯದಲ್ಲಿ ಉದ್ಯಮಿ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ವಿಪಕ್ಷಗಳ ಗದ್ದಲದ ಹಿನ್ನೆಲೆ ಸಭಾಪತಿ ಓಂ ಬಿರ್ಲಾ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು. ಅಧಿವೇಶನದ ಮೊದಲ ದಿನದಂದು ಸದನವು ಸಭೆ ಸೇರಿದ ತಕ್ಷಣ, ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಸದನಕ್ಕೆ ಚುನಾಯಿತರಾಗಿದ್ದ ವಸಂತರಾವ್ ಚವಾಣ್ ಮತ್ತು ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಚುನಾಯಿತರಾಗಿದ್ದ ಎಸ್​.ಕೆ ನೂರುಲ್ ಇಸ್ಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments