Tuesday, September 2, 2025
HomeUncategorizedಬಿಜೆಪಿಯವರು ಬಡವರ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಬಡವರ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಇಂದು ನಂದಿನಿ ಉತ್ಪನ್ನಗಳ ಮಾರ್ಕೇಟಿಂಗ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ದೆಹಲಿಯಲ್ಲಿ ನಂದಿನಿ ಹಾಲಿನ ಮಾರಟಕ್ಕೆ ಚಾಲನೆ ನೀಡಿದರು. ಈ  ಸಮಯದಲ್ಲಿ ಮಾಧ್ಯಮದದೊಂದಿಗೆ ಮಾತನಾಡಿದ ಸಿಎಂ ರಾಜ್ಯ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ನಡೆಸಿದರು.

ಅಶೋಕ್​ ಹೆಂಡತಿಯು ಉಚಿತವಾಗಿ ಬಸ್​​ನಲ್ಲಿ ಓಡಾಡುತ್ತಾರೆ? 

ಗ್ಯಾರಂಟಿ ವಿಷಯವಾಗಿ ಮಾತನಾಡಿದ ಸಿಎಂ ‘ನಾವು ಜನರಿಗಾಗಿ ಐದು ಗ್ಯಾರೆಂಟಿ ಸ್ಕೀಮ್ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಬಿಜೆಪಿ ಬಡವರ ವಿರೋಧಿಯಾಗಿದ್ದಾರೆ
ಬಸ್​ನಲ್ಲಿ ಯಾರು ಪ್ರೀಯಾಗಿ ತಿರುಗಲ್ಲ ಎಂದು ಹೇಳುತ್ತಾರೆ. ವಿಪಕ್ಷ ನಾಯಕ ಅಶೋಕ್ ಹೆಂಡತಿ ಹೋಗಲ್ವಾ ಫ್ರೀಯಾಗಿ ಓಡಾಡಲ್ವ, ಜಾತಿ, ಧರ್ಮ, ಬಿಟ್ಟು ಎಲ್ಲರೂ ಬಸ್​​ನಲ್ಲಿ ತಿರುಗುತ್ತಾರೆ ಎಂದು ಹೇಳಿದರು.

BPL  ಕಾರ್ಡ್​ ರದ್ದತಿ ಬಗ್ಗೆ ಸಿಎಂ ಮಾತು 

ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು. ಬಿಜೆಪಿಯವರು ರಾಜಕೀಯಕ್ಕಾಗಿ ಚರ್ಚೆ ಮಾಡ್ತಿದ್ದಾರೆ. ಫುಡ್ ಸೆಕ್ಯೂರಿಟಿ ಆಕ್ಟ್ ತಂದವರು ಮನಮೋಹನ್ ಸಿಂಗ್. ಆಗ ಮುರುಳಿ ಮನೋಹರ ಜೋಶಿ ವಿರೋಧಿಸಿ ಭಾಷಣ ಮಾಡಿದ್ದರು. ಈಗ ಇದರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಈಗ. ಕಾಂಗ್ರೆಸ್ ಸರಕಾರ 7ಕೆಜಿ ಅಕ್ಕಿ ಕೊಟ್ಟಿತ್ತು ಆದರೆ ಯಡಿಯೂರಪ್ಪ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿತು. ಬಡವರ ಬಗ್ಗೆ ಮಾತನಾಡುವುದು ಬಹಳ ಸುಲಭ ಆದರೆ  ಆಹಾರ ಪದಾರ್ಥಗಳನ್ನು ಉಚಿತವಾಗಿ ಕೊಡಲು ತೀರ್ಮಾನ ಮಾಡಿದ್ದು ಕಾಂಗ್ರೆಸ್. ಯಾರು ತೆರಿಗೆ ಕಟ್ಟುತ್ತಾರೆ, ಸರಕಾರಿ ನೌಕರರಿದ್ದಾರೆ ಅವರಿಗೆ ಕೊಡೊದು ಬೇಡ ಅಂತಾ ಹೇಳಿದ್ದೇವೆ ಎಂದು ಹೇಳಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments